“ನೆಲದ ನೆನಪು”

ಗೆಲುವು ಸಾಧಿಸಬೇಕು ಎನ್ನುವ  ತುಡಿತವೇ ಎಲ್ಲಾ ಸತ್ಕಾರ್ಯಗಳಿಗೆ ಪ್ರೇರಕ ಶಕ್ತಿ  – ಶ್ರೀಮತಿ  ಹರಿಣಿ ಪುತ್ತೂರಾಯ

 ಮಾಡುವ ಪ್ರತಿ ಕೆಲಸದಲ್ಲಿನ ಆಸಕ್ತಿ, ಉತ್ಸಾಹ ವ್ಯಕ್ತಿತ್ವಕ್ಕೆ ಹೊಸ ಮೆರುಗನ್ನು ನೀಡುವುದರ  ಮೂಲಕವಾಗಿ ಜೀವನೋತ್ಸಾಹವನ್ನು ತುಂಬುತ್ತದೆ, ಗೆಲುವು ಸಾಧಿಸಬೇಕು ಎನ್ನುವ  ತುಡಿತವೇ ಎಲ್ಲಾ ಸತ್ಕಾರ್ಯಗಳಿಗೆ ಪ್ರೇರಕ ಶಕ್ತಿ  ಎಂದು ನೆಹರು ಮೆಮೋರಿಯಲ್ ಪಿ. ಯು ಕಾಲೇಜು, ಸುಳ್ಯ ಇಲ್ಲಿನ  ಪ್ರಾಂಶುಪಾಲರಾದ ಶ್ರೀಮತಿ  ಹರಿಣಿ ಪುತ್ತೂರಾಯ ಅವರು ನುಡಿದರು. ಈ ಮಣ್ಣಿನ ಸಂಸ್ಕೃತಿ ಮತ್ತು ಪರಿಕರಗಳು, ಆಹಾರ ವೈವಿಧ್ಯತೆ ಬಿಂಬಿಸುವ  ನೆಲದ ನೆನಪು ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು ಬದುಕು ಸುಂದರವಾಗಲು ನಮ್ಮ ನೆಲದ ಆಚಾರ ವಿಚಾರಗಳಲ್ಲಿ ತನ್ಮೂಲಕ ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ  ಕಾಲೇಜಿನ ಎಲ್ಲ ಉಪನ್ಯಾಸಕ ವೃಂದ ದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕರುಗಳು ಎಲ್ಲಾ ಉಪನ್ಯಾಸಕರಿಗೆ ವೀಳ್ಯ ನೀಡಿ ಬರಮಾಡಿಕೊಂಡರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಕು. ಬೇಬಿ ವಿದ್ಯಾ ಪಿ.ಬಿ ಇವರು ನಿರ್ವಹಿಸಿದರು. ನಂತರದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ನಾಲ್ಕು ಗುಂಪುಗಳಲ್ಲಿ ಕರಾವಳಿಯ ಖಾದ್ಯ ಗಳು, ಪರಿಕರಗಳು ಮತ್ತಿತರ ವಸ್ತುಗಳನ್ನು ಜೋಡಿಸಿ ಪ್ರಸ್ತುತ ಪಡಿಸಿದರು.