ಕುಮಾರ ವ್ಯಾಸ ಭಾರತ ಕೃತಿಯ ಆಯ್ದ ಭಾಗದ ಕುರಿತು ಉಪನ್ಯಾಸ

ಯುಗ ಧರ್ಮಕ್ಕನುಗುಣವಾಗಿ ಪಾತ್ರಗಳನ್ನು ಅದ್ಭುತವಾಗಿ ಸೃಷ್ಟಿಸಿದ್ದು ಕುಮಾರವ್ಯಾಸ- ಶ್ರೀ ವೆಂಕಟ್ರಾಮ ಭಟ್

ಕುಮಾರವ್ಯಾಸ ಮಹಾ ಕವಿ ವ್ಯಾಸ ಭಾರತದಿಂದ ವಸ್ತುವನ್ನು  ಸ್ವೀಕರಿಸಿದರೂ ಬರವಣಿಗೆಯಲ್ಲಿ ಸ್ವತಂತ್ರತೆಯನ್ನು ರೂಢಿಸಿಕೊಂಡ ಪ್ರತಿಭಾಶಾಲಿ. ಯುಗ ಧರ್ಮಕ್ಕನುಗುಣವಾಗಿ ಪಾತ್ರಗಳನ್ನು ಅದ್ಭುತವಾಗಿ ಸೃಷ್ಟಿಸಿದ್ದು ಪಾತ್ರಗಳಿಗೆ ಜೀವಂತಿಕೆ   ತುಂಬಿದ್ದಾನೆ. ಪಾತ್ರದ ವಿಶೇಷತೆಗೆ ತಕ್ಕಂತೆ ವಸ್ತುವಿನ ವೈವಿಧ್ಯಕ್ಕೆ ಹೊಂದುವಂತೆ ಮಹತ್ವದ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ.  ” ಎಂದು ಖ್ಯಾತ ಯಕ್ಷಗಾನ ಅರ್ಥದಾರಿ ಶ್ರೀ ವೆಂಕಟ್ರಾಮ  ಭಟ್ ಸುಳ್ಯ   ಅವರು ಹೇಳಿದರು. ಅವರು ನೆಹರು ಮೆಮೋರಿಯಲ್ ಪಿ. ಯು ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಲಾದ ಕುಮಾರ ವ್ಯಾಸ ಭಾರತ ಕೃತಿಯ ಆಯ್ದ ಭಾಗದ ಕುರಿತು ಉಪನ್ಯಾಸ   ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.