ವಾಣಿಜ್ಯ ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕಾದ ವೃತ್ತಿ ಕೌಶಲ್ಯಗಳು

ಕೆಲವು ಕೌಶಲ್ಯಗಳನ್ನು ಪ್ರಕೃತಿ  ನಮಗೆ ಕಲಿಸುತ್ತದೆ. ಓದುವುದು ಬರೆಯುವುದು ಲೆಕ್ಕಾಚಾರದ ಸಾಮರ್ಥ್ಯಗಳನ್ನು ನಿತ್ಯ ಜೀವನದಲ್ಲಿ ನಾವೇ ಕಲಿತುಕೊಳ್ಳಬೇಕು. ವೃತ್ತಿ ಮಾರ್ಗದರ್ಶನಕ್ಕೆ ಬೇಕಾದ ಆಸಕ್ತಿ , ಆತ್ಮ ವಿಶ್ವಾಸ,ಒಗ್ಗಟ್ಟು  ಇವುಗಳನ್ನು ಮೈಗೂಡಿಸಿಕೊಂಡು ಹೆಜ್ಜೆ ಇಟ್ಟಾಗ ನಮ್ಮ ವೃತ್ತಿ ಫಲಪ್ರದವಾಗುವುದು ಎಂದು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಎಂಬಿ ಎ ವಿಭಾಗ ಮುಖ್ಯಸ್ಥರಾದ ಡಾ. ಸುರೇಖಾ ಪ್ರಭು ಅವರು ಹೇಳಿದರು.

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ವಾಣಿಜ್ಯ ಸಂಘದ ವತಿಯಿಂದ ನಡೆದ ಆಧುನಿಕ ಯುಗದಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕಾದ ವೃತ್ತಿ ಕೌಶಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಭಾ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯರು ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕಿಯರಾದ ಶ್ರೀಮತಿ ಸಾವಿತ್ರಿ, ಕು. ಹರ್ಷಿತ ಉಪಸ್ಥಿತರಿದ್ದರು.

 ವಿದ್ಯಾರ್ಥಿ ಶ್ರೀ ರಾಮ ಸ್ವಾಗತಿಸಿ, ಹಲೀಮತ್ ಅಜ್ಮೀನ ವಂದಿಸಿದರು. ವಿದ್ಯಾರ್ಥಿಸ್ನಿ ಸಾಧನ ನಿರೂಪಿಸಿದರು.