Know GST – Talk by Prof RudraKumar, NMC

ಅತ್ಯಂತ ಕ್ಲಿಷ್ಟವಾಗಿದ್ದ ತೆರಿಗೆ ವ್ಯವಸ್ಥೆಯನ್ನು  ಸರಳಗೊಳಿಸುವ ಉದ್ದೇಶಹೊಂದಿರುವ ಹೊಸ ತೆರಿಗೆ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತರಲಾಯಿತು ಮತ್ತು ಹಳೆಯ ವ್ಯವಸ್ಥೆಯಿಂದ ಹೊಸ  ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದರೆ ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅತೀ ಅಗತ್ಯ  ಎಂದು ನೆಹರು ಪದವಿ ಕಾಲೇಜಿನ ವಾಣಿಜ್ಯ  ವಿಭಾಗದ ಉಪನ್ಯಾಸಕರಾದ  ಪ್ರೊ. ರುದ್ರಕುಮಾರ್     ಹೇಳಿದರು. ಅವರು ಕಾಲೇಜಿನ  ವಾಣಿಜ್ಯ  ಸಂಘ ಆಯೋಜಿಸಿದ್ದ  GST  ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಹೊಸ ತೆರಿಗೆ ವ್ಯವಸ್ಥೆಯ ಚಿಂತನೆ ಯಾಕೆ ಬಂತು, ಅದನ್ನು ಯಾವ ರೀತಿಯಾಗಿ ಅಳವಡಿಸುವ ಪ್ರಯತ್ನಗಳು ನಡೆದವು ಮತ್ತು ಒಟ್ಟಾರೆಯಾಗಿ ಹೊಸ ತೆರಿಗೆ ವ್ಯವಸ್ಥೆ ಏನು ಎಂಬುದನ್ನು ಸವಿವರವಾಗಿ  ತಿಳಿಯಪಡಿಸಿದರು

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ  ಭವಿಷ್ಯದ ಉದ್ಯೋಗದ ಅವಕಾಶಗಳನ್ನು ಬಳಸಿಕೊಳ್ಳಬೇಕಾದರೆ ಸಮಯಕ್ಕೆ ಸರಿಯಾಗಿ ಆಗುಹೋಗುಗಳನ್ನು ತಿಳಿದುಕೊಳ್ಳುವುದು  ಅಗತ್ಯವಿದೆ ಎಂದರು. ವೇದಿಕೆಯಲ್ಲಿ ಉಪನ್ಯಾಸಕರಾದ ಶ್ರೀಮತಿ ಸಾವಿತ್ರಿ ಮತ್ತು ಕು. ಹರ್ಷಿತಾ  ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯತಾ ಅತಿಥಿಗಳನ್ನು ಪರಿಚಯಿಸಿ, ವಿಸ್ಮಿತ ಸ್ವಾಗತಿಸಿ, ವಿದ್ಯಾರ್ಥಿ ಮೋಕ್ಷಿತ್ ವಂದಿಸಿದರು. ಆಕಾಂಕ್ಷ ಕಾರ್ಯಕ್ರಮ ನಿರ್ವಹಿಸಿದರು.