ಹಿಂದಿ ದಿನಾಚರಣೆ

ಹಿಂದಿ ಭಾಷೆ  ಸಂಸ್ಕೃತಿಯ ಒಂದು ಭಾಗವಾಗಿ ಪ್ರಪಂಚದಲ್ಲಿ ವಿಸ್ತಾರವಾಗಿ ಹಬ್ಬಿದ್ದು ಅದನ್ನು ಬೆಳೆಸುವಲ್ಲಿ ನಾವು ಪ್ರಮುಖ ಪಾತ್ರ ವಹಿಸಬೇಕೆಂದು  ಎಂದು ಮೇಧಾ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪ್ರಫುಲ್ಲ   ಅವರು  ಹೇಳಿದರು.  ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿ ಆಯೋಜಿಸಲಾದ ಹಿಂದಿ ದಿನಾಚರಣೆಯಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು. ಭಾಷೆಯನ್ನು ಕಲಿತು ಮಾತನಾಡಿದಾಗ ಮಾತ್ರ ಭಾಷೆಯ ಸಮೃದ್ಧತೆ ಹೆಚ್ಚತ್ತದೆ ಎಂದು ಹೇಳಿದರು. ಕಾಲೇಜಿನ ಹಿಂದಿ ಉಪನ್ಯಾಸಕಿ  ಶ್ರೀಮತಿ ರಾಜೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

 ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಹರಿಣಿ ಪುತ್ತೂರಾಯರು  ಮಾತನಾಡಿ  ರಾಷ್ಟ್ರ ಭಾಷೆ ಹಿಂದಿಯ ಘನತೆ, ಗೌರವ ವನ್ನು ದೇಶೀ ಸಂಸ್ಕತಿಯಲ್ಲಿ ಅಳವಡಿಸಿಕೊಂಡಾಗ ಭಾಷೆ ಶ್ರೀಮಂತವಾಗುತ್ತದೆ ಎಂದರು. ವಿದ್ಯಾರ್ಥಿಗಳಾದ ಅನೀಶ್ ಸ್ವಾಗತಿಸಿ, ಮೋಕ್ಷಿತ್ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಆಕಾಂಕ್ಷ ಮತ್ತು ಪೂಜಾ ನಿರ್ವಹಿಸಿದರು. ವಿದ್ಯಾರ್ಥಿಗಳು  ಹಿಂದಿ ಸಮೂಹ ಗೀತೆ , ಭಾಷಣ ಮುಂತಾದುವುಗಳನ್ನು ನಡೆಸಿಕೊಟ್ಟರು