ಜಿಲ್ಲಾಮಟ್ಟದ ಪದವಿಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟ

ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ನೆಹರು ಮೆಮೋರಿಯಲ್ ಪ.ಪೂ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಜಿಲ್ಲಾಮಟ್ಟದ ಪದವಿಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟ  ಸೆ. 19 ರಂದು ಕಾಲೇಜು ಮೈದಾನದಲ್ಲಿ ನಡೆಯಿತು.

ಉಧ್ಘಾಟನೆಯನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಮುಂಡೋಡಿಯವರು ನೆರವೇರಿಸಿ ಕಬಡ್ಡಿ ರಾಷ್ಟ್ರೀಯ ಮಾನ್ಯತೆ ಪಡೆದ ಆಟವಾಗಿದ್ದು ಇಂದು ವಿಶ್ವದಲ್ಲಿ ಜನಪ್ರಿಯ ಕ್ರೀಡೆಯಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಸುಳ್ಯದ ತಹಶೀಲ್ದಾರ್ ಶ್ರೀ ಕು. ಅಹಮದ್ ಅವ್ರು ಮಾತನಾಡಿ ಕ್ರೀಡಾ ಸ್ಪೂರ್ತಿಯೊಂದಿಗೆ ಪರಸ್ಪರ ಸಹಕಾರ ಮನೋಭಾವದಿಂದ ಆಟವಾಡಿ, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದು ನುಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ  ನೆಹರು ಮೆಮೋರಿಯಲ್ ಪದವಿ   ಕಾಲೇಜು ಇಲ್ಲಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಬಾಲಚಂದ್ರ ಗೌಡ ಅವರು ಮಾತನಾಡಿ ಗ್ರಾಮೀಣ ಕ್ರೀಡೆ ಕಬಡ್ಡಿ ಇಂದು ಜನಪ್ರಿಯ ಆಟವಾಗಿದ್ದು ವಿದ್ಯಾರ್ಥಿನಿಯರು ತೊಡಗಿಸಿಕೊಂಡಿರುವುದು ಸಂತೋಷ ಎಂದರು. ವೇದಿಕೆಯಲ್ಲಿ ಜಿಲ್ಲಾ ಕ್ರೀಡಾ ಸಂಯೋಜಕ ಶ್ರೀ ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದರು.   ಕಾಲೇಜಿನ ಪ್ರಾಂಶುಪಾಲರು ಹರಿಣಿ ಪುತ್ತೂರಾಯ ಸ್ವಾಗತಿಸಿ , ದೈಹಿಕ ನಿರ್ದೇಶಕರಾದ ಶ್ರೀ ನಾಗರಾಜ ಅವರು ವಂದಿಸಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕಿ ಕು. ಬೇಬಿ ವಿದ್ಯಾ ಮತ್ತು ಉಪನ್ಯಾಸಕ ಶ್ರೀ ಹರೀಶ್ ಅವರು ನಿರ್ವಹಿಸಿದರು.