ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ನೆಹರು ಮೆಮೋರಿಯಲ್ ಪದವಿ ಕಾಲೇಜು ಇದರ ಪ್ರಾಂಶುಪಾಲರು ಡಾ. ಕೆ. ಗಿರಿಧರ ಗೌಡ ಮತ್ತು ನೆಹರು ಮೆಮೋರಿಯಲ್ ಪದವಿ ಕಾಲೇಜು ಇಲ್ಲಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಬಾಲಚಂದ್ರ ಗೌಡ ಅವರು ಭಾಗವಹಿಸಿದ್ದರು. ಡಾ. ಕೆ. ಗಿರಿಧರ ಗೌಡ ಅವರು ಮಾತನಾಡಿ , ಕಬಡ್ಡಿ ದೈಹಿಕ ಕ್ಷಮತೆಯನ್ನು ಹೆಚ್ಚಿಸುವುದರ ಮೂಲಕವಾಗಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎನ್ನುತ್ತಾ ಸೋಲು ಗೆಲುವುಗಳನ್ನು ಸಮಭಾವದಿಂದ ಸ್ವೀಕಾರ ಮಾಡಬೇಕು ಎಂದರು . ಪ್ರೊ.ಬಾಲಚಂದ್ರ ಗೌಡ ಅವರು ಭಾಗವಹಿಸಿದ ಎಲ್ಲರಿಗೂ ಮತ್ತು ವಿಜಯಿಶಾಲಿಯಾದವರಿಗೆ ಕೆವಿಜಿ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು ಮತ್ತು ಬಹುಮಾನ ವಿತರಣೆಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಜಿಲ್ಲಾ ಸಂಯೋಜಕ ಶ್ರೀ ಪ್ರೇಮನಾಥ ಶೆಟ್ಟಿ ಮತ್ತು ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯರು ಉಪಸ್ಥಿತರಿದ್ದರು. ಉಪನ್ಯಾಸಕ ಲಕ್ಷ್ಮಣ್ ಏನೆಕಲ್ ಸ್ವಾಗತಿಸಿ , ಉಪನ್ಯಾಸಕರಾದ ಕು. ಬೇಬಿ ವಿದ್ಯಾ ಮತ್ತು ಶ್ರೀ ಹರೀಶ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಹುಡುಗಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಂಡ ಮೂಡಬಿದ್ರೆಯ ಆಳ್ವಾಸ್ ಪ್ರಥಮ ಸ್ಥಾನ ಪಡೆದರೆ , ಹುಡುಗರ ವಿಭಾಗದಲ್ಲಿ ಮಂಗಳೂರು ನಗರ ವಿಕಾಸ್ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನಿಯಾಗಿ ಹುಡುಗಿಯರ ಬೆಳ್ತಂಗಡಿ ಎಸ.ಡಿ ಎಂ ತಂಡ ಮತ್ತು ಹುಡುಗರ ಪುತ್ತೂರು – ಉಪ್ಪಿನಂಗಡಿ ಸರಕಾರಿ ಪ.ಪೂ, ಕಾಲೇಜು ತಂಡಗಳು ಪಡೆಯಿತು.
ರಾಜ್ಯ ಮಟ್ಟಕ್ಕೆ ಪ್ರತಿನಿಧಿಸುವ ದಕ್ಷಿಣ ಕನ್ನಡ ಜಿಲ್ಲಾ ಹುಡುಗರ ಮತ್ತು ಹುಡುಗಿಯರ ತಂಡಗಳನ್ನು ಜಿಲ್ಲಾ ಸಂಯೋಜಕ ಶ್ರೀ ಪ್ರೇಮನಾಥ ಶೆಟ್ಟಿ ಅವರು ಪ್ರಕಟಿಸಿದರು.