ಬೇಂದ್ರೆಯವರ ಬದುಕು -ಬರಹ ಕಾರ್ಯಕ್ರಮ

ವರಕವಿ ಬೇಂದ್ರೆಯವರು ಉತ್ಕ್ರಷ್ಟ ಕೃತಿ ರಚನೆಯನ್ನು ಮಾಡುವುದರ ಮೂಲಕ ಕನ್ನಡಕ್ಕೆ ಶ್ರೀಮಂತ ಕಾಣಿಕೆಯನ್ನು ನೀಡಿದ್ದಾರೆ ಬೇಂದ್ರೆಯವರ ಕವನಗಳು ,ನಾದ ,ಲಯ ,ಚೈತನ್ಯ  & ವಿಶ್ವ ಪ್ರಜ್ಞೆಯಿಂದ ಕೂಡಿದ್ದು, ಮುಖ್ಯವಾಗಿ ದೇಸಿ ಭಾಷೆಯಲ್ಲಿ ಕೃತಿ ರಚಿಸಿ ಕನ್ನಡಕ್ಕಾಗಿ ತನ್ನನ್ನು ತಾನು ಒಪ್ಪಿಸಿಕೊಂಡವರು ಕವಿ ಬೇಂದ್ರೆಯವರು ಎಂದು ವಾಸವಿ ಸಾಹಿತ್ಯ ಕಲಾ ವೇದಿಕೆ ಅಧ್ಯಕ್ಷೆ ಡಾ.ವೀಣಾ  ಹೇಳಿದರು .ಅವರು ಸುಳ್ಯ ಎನ್ನೆಂಪಿಯುಸಿಯಲ್ಲಿ ಕನ್ನಡ  ವಿಭಾಗದ ವತಿಯಿಂದ ನಡೆದ ಬೇಂದ್ರೆಯವರ ಬದುಕು -ಬರಹ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಹರಿಣಿ ಪುತ್ತೂರಾಯ ಅವರು  ಮಾತನಾಡಿ ಬೇಂದ್ರೆ ಕವಿತೆಯು ಪ್ರೀತಿಯನ್ನು ಉಣ ಬಡಿಸುತ್ತದೆ ,ನೋವಿಗೆ ಸಾಂತ್ವನ ಹೇಳುತ್ತದೆ  ಎಂದು ತಿಳಿಸಿದರು.  ವೇದಿಕೆಯಲ್ಲಿ ವಿದ್ಯಾರ್ಥಿ  .ಕ್ಷೇಮಾಧಿಕಾರಿ ಲಕ್ಷ್ಮಣ್  ಎಂ,ಕನ್ನಡ ಉಪನ್ಯಾಸಕಿ ಕಾರ್ಯಕ್ರಮ ಸಂಯೋಜಕಿ ಕುಮಾರಿ ಬೇಬಿ ವಿದ್ಯಾ ಪಿ ಬಿ ಉಪಸ್ಥಿತರಿದ್ದರು ವಿದ್ಯಾರ್ಥಿ ಶ್ರವಣ್  ಪ್ರಾರ್ಥಿಸಿದರು .ಉಪನ್ಯಾಸಕಿ ಕುಮಾರಿ ಬೇಬಿ ವಿದ್ಯಾ ಪಿ ಬಿ ಸ್ವಾಗತಿಸಿ ,ಪ್ರಾಸ್ತಾವಿಕ ನುಡಿಗಳನ್ನಾಡಿದರು .ವಿದ್ಯಾರ್ಥಿನಿಯರಾದ ನಂದಿತ,ಅನಘ  ಬೇಂದ್ರೆಯವರ ಗೀತೆ ಹಾಡಿದರು ,ತನ್ವಿ ಎಂ  ವಂದಿಸಿ ,ಜ್ಞಾನೇಶ್ ಕೆ .ಜೆ ನಿರೂಪಿಸಿದರು .