ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ – 100 ವರುಷಗಳು ವಿಶೇಷ ಉಪನ್ಯಾಸ

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಹೃದಯವಿಲ್ಲದ ಹತ್ಯಾಕಾಂಡಕ್ಕೆ ಸಾಕ್ಷಿಯಾಯಿತು. ಆಂಗ್ಲರ ಕಠಿಣ ಮತ್ತು ಕ್ರೂರವಾದ ಧೋರಣೆಗಳು ಭಾರತೀಯ ದೇಶ ಭಕ್ತರಲ್ಲಿ ಸ್ವಾತಂತ್ರದ ಕೆಚ್ಚನ್ನು , ಶ್ರದ್ಧೆಯನ್ನು ಹೆಚ್ಚಿಸಿತು  ಎಂದು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಹೇಳಿದರು. ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯಇಲ್ಲಿನ ಮಾನವಿಕ ಸಂಘದಿಂದ ಏರ್ಪಡಿಸಲಾದ ” ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ – 100 ವರುಷಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ನಮಗೆ ಸ್ವಾತಂತ್ಯ ದೊರಕಿದುದರ ಹಿಂದೆ ಅದೆಷ್ಟೋ ಜನರ ಕಣ್ಣೀರ ಕಥೆಯಿದೆ ,   ಸ್ವಾತಂತ್ರ್ಯದ ಸಿಹಿಯ ಹಿಂದಿನ ಕಹಿಯನ್ನು ತಿಳಿದುಕೊಳ್ಳಬೇಕು ಮತ್ತು ಸ್ವಾತಂತ್ರ್ಯದ ಸದುಪಯೋಗ ಮುಖ್ಯ  ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಹರಿಣಿ ಪುತ್ತೂರಾಯರು ಮಾತನಾಡಿ ಇತಿಹಾಸವನ್ನು ಏಕಮುಖವಾಗಿ ನೋಡುವುದಲ್ಲ , ಈ ನೆಲದ  ಅಂತರಾಳದ ನೋವನ್ನು ತಿಳಿದುಕೊಳ್ಳಬೇಕು , ಇತಿಹಾಸದ ದುರಂತ ಮನುಕುಲಕ್ಕೆ ಪಾಠವಾಗಬೇಕು ಮತ್ತು ಹೊರಜಗತ್ತಿನ ಸಂಘರ್ಷಗಳು ಬಲಿಷ್ಠವಾಗಿ ಬೆಳೆಯಲು ಸಹಾಯವಾಗಬೇಕು  ಎಂದು ಹೇಳಿದರು. ವೇದಿಕೆಯಲ್ಲಿ ಮಾನವಿಕ ಸಂಘದ ನಿರ್ದೇಶಕಿ ಉಪನ್ಯಾಸಕಿ ಶ್ರೀಮತಿ ರೇಷ್ಮಾ  ವಿದ್ಯಾರ್ಥಿ ಕ್ಷೇಮಪಾಲಕ ಶ್ರೀ ಲಕ್ಷ್ಮಣ್   ಏನೆಕಲ್ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕರಾದ ಶ್ರೀ ಹರೀಶ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಲಕ್ಷ್ಮಣ್ ಏನೆಕಲ್ ಅವರು ವಂದಿಸಿದರು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಅತಿಥಿಗಳೊಡನೆ ಸಂವಾದ ನಡೆಸಿದರು.