ಆಯುರ್ವೇದ ಮತ್ತು ಆಯುರ್ವೇದದಲ್ಲಿ ಶಿಕ್ಷಣಾವಕಾಶಗಳು-ಡಾ. ರೋಹಿಣಿ ಭಾರದ್ವಾಜ್

ಸಾವಿರಾರು ವರುಷಗಳ ಇತಿಹಾಸವಿರುವ ಆಯುರ್ವೇದ ಆಧುನಿಕ ದಿನಗಳಲ್ಲಿ ಅತ್ಯಂತ ಬೇಡಿಕೆಯ ವೈದ್ಯ ವಿಜ್ಞಾನ . ಮನುಷ್ಯನ ಜೀವನ ಕ್ರಮವನ್ನು ಹೇಳುವ ವಿಜ್ಞಾನವೇ ಆಯುರ್ವೇದ ಎಂದು ಕೆವಿಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕಿ   ಡಾ. ರೋಹಿಣಿ ಭಾರದ್ವಾಜ್ ಹೇಳಿದರು.  ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ  ಇಲ್ಲಿನ ವಿಜ್ಞಾನ   ವಿಭಾಗದಿಂದ  ಆಯುರ್ವೇದ ಮತ್ತು ಆಯುರ್ವೇದದಲ್ಲಿ ಶಿಕ್ಷಣಾವಕಾಶಗಳು ಎಂಬುದರ ಬಗ್ಗೆ ಆಯೋಜಿಸಲಾದ  ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾಲೇಜಿನ ಪ್ರಾಂಶಪಾಲರು ಶ್ರೀಮತಿ ಹರಿಣಿ ಪುತ್ತೂರಾಯ ಮತ್ತು ಬೌತಶಾಸ್ತ್ರ ಉಪನ್ಯಾಸಕ  ಶ್ರೀ ದಾಮೋದರ್  ಅವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ಉಪನ್ಯಾಸಕಿ ರತ್ನಾವತಿ ಸ್ವಾಗತಿಸಿ ,  ಉಪನ್ಯಾಸಕ ಶ್ರೀ ಕಿಶೋರ್ ವಂದಿಸಿದರು ಹಾಗು ಉಪನ್ಯಾಸಕಿ ಶ್ರೀಮತಿ ವಿನುತಾ ಕಾರ್ಯಕ್ರಮ ನಿರ್ವಹಿಸಿದರು.