ಕಾರ್ಗಿಲ್ ಹೋರಾಟದಲ್ಲಿ ಭಾರತೀಯ ಸೈನ್ಯ ತೋರಿದ ದಿಟ್ಟ ಹೋರಾಟದ ಫಲವಾಗಿ ನಾವು ಜಯವನ್ನು ಸಾಧಿಸುವಂತಾಯಿತು.ದುರ್ಗಮ ಪರ್ವತ ಶ್ರೇಣಿಗಳಲ್ಲಿ ನಮ್ಮ ಸೈನಿಕರು ತೋರಿದ ಶೌರ್ಯ, ತ್ಯಾಗ ಬಲಿದಾನಗಳ ಕಾರಣದಿಂದಾಗಿ ದೇಶ ಜಗತ್ತಿನ ಮುಂದೆ ತಲೆ ಎತ್ತಿ ನಡೆಯುವಂತೆ ಮತ್ತು ಶತ್ರು ಪಾಳಯಕ್ಕೆನಾವು ಕಠಿಣ ಪರಿಸ್ಥಿತಿಯಲ್ಲಿ ತಕ್ಕ ಉತ್ತರ ಬಲ್ಲೆವು ಎನ್ನುವ ಸಂದೇಶ ನೀಡಿದರು ಎಂದರು.ಭಾರತವನ್ನು ಒಗ್ಗೂಡಿಸಿದ್ದು ಆ ಮೂಲಕ ಭಾರತೀಯರ ಬೆಂಬಲ, ವಿಶ್ವಾಸ ವಿಜಯ ಸಾಧಿಸಲು ಮುಖ್ಯ ಕಾರಣವಾಯಿತು ಎಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಇತಿಹಾಸ ಉಪನ್ಯಾಸಕ ಹರೀಶ ಸಿ ಹೇಳಿದರು. ಅವರು ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಗಿಲ್ ದಿನಾಚರಣೆಯಲ್ಲಿ ಉಪನ್ಯಾಸ ನೀಡುತ್ತಾ ತಿಳಿಸಿದರು . ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ಕಾರ್ಗಿಲ್ ಯುದ್ಧ ದಲ್ಲಿ ನಮ್ಮ ದೇಶದ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ನಮ್ಮಸೇನಾ ಪಡೆ ನಿರಂತರ ಹೋರಾಟದ ಮೂಲಕ ಜಯ ತಂದು ಕೊಟ್ಟಿತು ಪ್ರಬಲ ಶಸ್ತ್ರ ಗಳು ನೆರವಾದವು,ನಾವು ಈ ನೆಲವನ್ನು ಗೌರವಿಸಬೇಕು,ಜನಸಂಖ್ಯೆ, ತಾoತ್ರಿಕತೆ ಮುಂದುವರಿಯುತ್ತಿರುವ ಈ ಕಾಲಘಟ್ಟದಲ್ಲಿ ದೇಶಕ್ಕೆ ಧಕ್ಕೆ ಬರದಂತೆ ಆದರ್ಶದ ಬಾಳು ನಡೆಸಬೇಕು ಎಂದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ದಾಮೋದರ ಪಿ,ವಿದ್ಯಾರ್ಥಿ ನಾಯಕಿ ದೀಕ್ಷಿತಾ ಆಚಾರ್ ಉಪಸ್ಥಿತರಿದ್ದರು.ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಲಾಯಿತು.ವಿದ್ಯಾರ್ಥಿನಿಯರಾದ ಪ್ರಮಿತ ಮತ್ತು ಬಳಗದವರು ಪ್ರಾರ್ಥಿಸಿದರು. ನಿಶ್ವಿತಾ ಮತ್ತು ಬಳಗದವರು ದೇಶಭಕ್ತಿ ಗೀತೆಗಳನ್ನು ಹಾಡಿದರು.ವಿದ್ಯಾರ್ಥಿ ಮಿಥುನ್ ನಾಯ್ಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಾಶಿ ಡಿ ಕಾರ್ಗಿಲ್ ದಿನದ ಕುರಿತು ಮಾತನಾಡಿದರು.ಸಾoಸ್ಕೃತಿಕ ಕಾರ್ಯದರ್ಶಿ ಗೌತಮ್ ಪಿ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಅನಾಸ್ ವಂದಿಸಿದರು.