ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ tally ಸರ್ಟಿಫಿಕೇಟ್ ಕೋರ್ಸ್ ನ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
Tally ಅತ್ಯಂತ ಉಪಯುಕ್ತಕಾರಿ ಕೋರ್ಸ್ ಆಗಿದ್ದು ಈ ತರಬೇತಿ ಪಡೆದವರಿಗೆ ಬಹಳಷ್ಟು ಬೇಡಿಕೆ ಇದ್ದು ವೃತ್ತಿ ಜೀವನದಲ್ಲಿ, ಸ್ವ ಉದ್ಯೋಗದಲ್ಲಿ ಸಹಕಾರಿಯಾಗುತ್ತದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಎನ್ನೆoಸಿಯ ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿಭಾಗ ಮುಖ್ಯಸ್ಥೆ ರಮ್ಯ ಎಸ್ ಕೆ ತಿಳಿಸಿದರು. ಅವರು tally ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾoಶುಪಾಲೆ ಹರಿಣಿ ಪುತ್ತೂರಾಯ ಅವರು ವಿದ್ಯಾರ್ಥಿಗಳು ಆಧುನಿಕ ಯುಗದಲ್ಲಿ ಹೆಚ್ಚು ಬೇಡಿಕೆ ಇರುವ tally ಕೋರ್ಸ್ ಕಲಿಯುವುದರಿಂದ ಮುಂದೆ ವಿಫುಲ ಅವಕಾಶಗಳು ಇದೆ ಹಾಗೂ ವ್ಯಕ್ತಿತ್ವ ವಿಕಸನ,ಕೌಶಲ್ಯ ಅಭಿವೃದ್ಧಿಯ ಅವಕಾಶಗಳನ್ನುನಾವು ಕಲಿತುಕೊಳ್ಳಬೇಕು ಎಂದು ಹೇಳಿದರು. ವೇದಿಕೆಯಲ್ಲಿ tally ಕೋರ್ಸ್ ತರಬೇತುದಾರರಾದ ಉಪನ್ಯಾಸಕಿ ಹರ್ಷಿತಾ ಎ.ಬಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ರಕ್ಷಾ,ಬಳಗದವರು ಪ್ರಾರ್ಥಿಸಿಸಿದರು. ಉಪನ್ಯಾಸಕಿ ಹರ್ಷಿತಾ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಸ್ವಾಗತಿಸಿ, ಉಪನ್ಯಾಸಕ ವಿನಯ ನಿಡ್ಯಮಲೆ ವಂದಿಸಿದರು.