ಸುಳ್ಯ ಎನ್ನೆoಪಿಯುಸಿಯಲ್ಲಿ ಹಿಂದಿ ದಿವಸ್ ಆಚರಣೆ

ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಸ 14 ರಂದು ಹಿಂದಿ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾ oಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ಹಿಂದಿ ಭಾಷೆಯು ರಾಷ್ಟ್ರೀಯ ಏಕತೆಯನ್ನು ಒಗ್ಗೂಡಿಸುವ ಮೂಲಕ ನಮ್ಮನ್ನು ಬಂಧಿಸುತ್ತದೆ. ದೇಶದ ಏಕೀಕರಣ, ಏಕತೆಯನ್ನು ಸಾಧಿಸಲು ಭಾಷೆಯ ಮೂಲಕ ಸಾಧ್ಯ.ಸಂವಹನ ಭಾಷೆಯಾಗಿ ಸಂಸ್ಕೃತಿಯ ಅರಿವಾಗಲು ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ ಹಿಂದಿ ಭಾಷೆಯನ್ನು ಎಲ್ಲರೂ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು ಎಂದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ,ಸಾವಿತ್ರಿ ಕೆ, ಹಿಂದಿ ಉಪನ್ಯಾಸಕಿ ರಾಜೇಶ್ವರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಚಲ ಬಳಗದವರು ಪ್ರಾರ್ಥಿಸಿದರು. ಗೌತಮ್ ಎ ಹೆಚ್ ಸ್ವಾಗತಿಸಿ ದರು.ಉಪನ್ಯಾಸಕಿ ರಾಜೇಶ್ವರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳು ಹಿಂದಿ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳಾದ ಸೂರಜ್ ಮತ್ತು ಸೌದ ಅವರು ಹಿಂದಿ ದಿನಾಚರಣೆಯ ಮಹತ್ವ, ಹಿಂದಿ ಭಾಷೆ ಬೆಳೆದು ಬಂದ ಬಗೆಯ ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಫಾತಿಮತ್ ಸಾನಿಯಾ ವಂದಿಸಿದರು.