ಸುಳ್ಯ ಎನ್ನೆoಪಿಯುಸಿಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ
ನಮ್ಮ ಕನಸುಗಳನ್ನು ನನಸಾಗಿಸಲು ಅವಕಾಶಗಳ ಕಡೆ ಗಮನ ನೀಡಬೇಕು, ಕನಸುಗಳು ಕಾರ್ಯ ಸಾಧನೆಗೆ ಸ್ಫೂರ್ತಿ ನೀಡಬಲ್ಲದು.ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಿದ್ಧರಾಗಬೇಕು. ಛಲ, ಶಿಸ್ತು,ಪ್ರಯತ್ನ,ಸಮರ್ಪಣಾ ಭಾವ,ತೀರ್ಮಾನ ಮೊದಲಾದ ಗುಣಗಳು ನಮ್ಮ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಭವಿಷ್ಯದ ಬಗ್ಗೆ ಯೋಚಿಸಿ ಕಾರ್ಯ ಪ್ರವೃತ್ತರಾಗಿ ಎಂದು ನಿವೃತ್ತ ಪ್ರಾ oಶುಪಾಲ, ಸಂಪನ್ಮೂಲ ವ್ಯಕ್ತಿ ಬಿ ವಿ ಸೂರ್ಯನಾರಾಯಣ ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ, ಉದ್ಯೋಗದ ವಿಫುಲ ಅವಕಾಶಗಳನ್ನು ತಿಳಿಸಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾ oಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಮತ್ತು ವೃತ್ತಿ ಬದುಕಿನ ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಬಹಳ ಮುಖ್ಯ,ಎಲ್ಲರೂ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳಿ ಎಂದು ಕರೆ ನೀಡಿದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ ಮತ್ತು ಸಾವಿತ್ರಿ ಕೆ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಅಭಿಷೇಕ್ ಎಂ ಪ್ರಾರ್ಥಿಸಿ,ಸೌದ ಕೆ ಸ್ವಾಗತಿಸಿದರು.ಉಪನ್ಯಾಸಕಿ ವಿನುತ ಕೆ ಎನ್ ನಿರೂಪಿಸಿ,ವಂದಿಸಿದರು.
![Career guidance program at NMPUC SULLIA (1)](https://nmpuc.org/wp-content/uploads/2022/12/Career-guidance-program-at-NMPUC-SULLIA-1-245x300.jpg)
![Career guidance program at NMPUC SULLIA (2)](https://nmpuc.org/wp-content/uploads/2022/12/Career-guidance-program-at-NMPUC-SULLIA-2-300x214.jpg)
![Career guidance program at NMPUC SULLIA (3)](https://nmpuc.org/wp-content/uploads/2022/12/Career-guidance-program-at-NMPUC-SULLIA-3-300x210.jpg)