ಪ್ರಗತಿಪರ ಕೃಷಿಕರಾದ ತಿರುಮಲೇಶ್ವರ ಭಟ್ ಕುರಿಯಾಜೆ ಇವರ ಕೃಷಿ ಭೂಮಿಗೆ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನ ಭೇಟಿ ಹಮ್ಮಿಕೊಳ್ಳಲಾಗಿತ್ತು.
20 ವರ್ಷದಿಂದ ಕೃಷಿ ಭೂಮಿಯಲ್ಲಿ ವಿಶಿಷ್ಟ ಮಾದರಿಯ ಅಡಿಕೆ ನಾಟಿ ವಿಧಾನ, ದೇಶ ವಿದೇಶದ ಹಣ್ಣಿನ ಗಿಡಗಳು, ಹಸು ಸಾಕಾಣಿಕೆ, ಸುತ್ತಮುತ್ತಲಿನ ಆವರಣದಲ್ಲಿ ಬೆಳೆಸಿದ ಉದ್ಯಾನವನ,ಸುಮಾರು 300 ಬಗೆಯ ಕಳ್ಳಿ ಸಸ್ಯಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಲಾಯಿತು .
ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರ ಮಾರ್ಗದರ್ಶನದಲ್ಲಿ ಈ ಭೇಟಿಯನ್ನು ಹಮ್ಮಿಕೊಳ್ಳಲಾಗಿತ್ತು.ವಿಜ್ಞಾನ ವಿಭಾಗದ ಉಪನ್ಯಾಸಕಿಯರಾದ ವಿನುತ ಕೆ ಎನ್,ನಯನ ಎಂ, ಉಮಾಶ್ರೀ ಪ್ರಭು,ಆಂಗ್ಲ ಭಾಷಾ ಉಪನ್ಯಾಸಕಿ ಪ್ರೇಮಲತಾ ಎ. ಇವರು ತಂಡದ ನೇತೃತ್ವ ವಹಿಸಿದ್ದರು.![study_tour(1)](https://nmpuc.org/wp-content/uploads/2023/08/study_tour1-768x1024.jpg)
![study_tour(3)](https://nmpuc.org/wp-content/uploads/2023/08/study_tour3.jpg)