Kanda Donji Day program by Sullia NMPUC

ಇಲ್ಲಿನ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ಕಲಾ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ‘ಕಂಡಡೊಂಜಿ ದಿನ’ ಕ್ರೀಡಾ ಕೂಟವು ಉದ್ಯಮಿ, ಸಾಮಾಜಿಕ ಮುಂದಾಳು ಮನಮೋಹನ ಪುತ್ತಿಲರ ‘ಪುತ್ತಿಲ ಫಾರ್ಮ್’ ಕಾoತಮಂಗಲದ ಗದ್ದೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಉದ್ಘಾಟಕರಾದ ಮನ ಮೋಹನ ಪುತ್ತಿಲರು ಮಾತನಾಡಿ ನಮ್ಮ ಪೂರ್ವಜರು ಶ್ರಮ ಜೀವಿಗಳಾಗಿ ಕೃಷಿ,ಧರ್ಮ, ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ್ದಾರೆ. ಯುವ ಜನಾಂಗ ಅದನ್ನು ಮುಂದುವರಿಸಿಕೊಂಡು ಹೋದಾಗ ನಮ್ಮ ಶ್ರೀಮಂತ ರೈತ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾ oಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ಕೃಷಿ ಬದುಕಿನ ಜೊತೆಗೆ ನಾವು ಬೆ ರೆಯಬೇಕು, ಪರಸ್ಪರ ಪ್ರೀತಿ, ವಿಶ್ವಾಸ ಹೊಂದಿ,ಈ ನೆಲದ ಮೇಲಿನ ಕಾಳಜಿ, ಗೌರವ ಇದ್ದಾಗ ಉತ್ತಮ ಬದುಕು ನಡೆಸಲು ಸಾಧ್ಯ. ಮಣ್ಣಿನ ಸ್ಪರ್ಶ ಹೊಸತನದ ಸ್ಫೂರ್ತಿ ನೀಡುವುದು. ಅನ್ನ ನೀಡುವ ರೈತರ ಶ್ರಮ ನಮಗೆ ಮಾದರಿ,ಪಠ್ಯ ತರಗತಿಗೆ ಪೂರಕವಾಗಿ ಗದ್ದೆಯಲ್ಲಿ ನಡೆಯಲಿರುವ ಈ ಕ್ರೀಡಾ ಕೂಟ ವಿದ್ಯಾರ್ಥಿಗಳಿಗೆ ಹೊಸ ಅನುಭವ ಕಟ್ಟಿ ಕೊಡಲಿ,ಬದುಕಿನ ಹಾದಿಯಲ್ಲಿ ಈ ಅನುಭವ ಶಾಶ್ವತವಾಗಿರಲಿ ಎಂದು ಹೇಳಿದರು.ಕಾರ್ಯಕ್ರಮದ ಸ್ಥಳ ದಾನಿಗಳಾದ ಮನಮೋಹನ ಪುತ್ತಿಲ ಅವರಿಗೆ ಸನ್ಮಾನವನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ,ವಾಣಿಜ್ಯ ಸಂಘದ ಸಂಚಾಲಕಿ ಸಾವಿತ್ರಿ ಕೆ,ಕಾರ್ಯಕ್ರಮ ಸಂಯೋಜಕರು,ಉಪನ್ಯಾಸಕರಾದ ವಿನಯ ನಿಡ್ಯಮಲೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಬಿಕಾ ಪ್ರಾರ್ಥಿಸಿ, ಉಪನ್ಯಾಸಕ ವಿನಯ್ ನಿಡ್ಯಮಲೆ ಸ್ವಾಗತಿಸಿದರು.ವಿ ಕ್ಷೇಮಾಧಿಕಾರಿ ಹರೀಶ ಸಿ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಕಾರ್ಯಕ್ರಮ ನಿರೂಪಿಸಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದೈ ಶಿ ನಿರ್ದೇಶಕರಾದ ಮಿಥನ್,ಸುಳ್ಯ ಎನ್ನೆoಪಿಯುಸಿಯ ಕ್ರೀಡಾ ಕೋಚ್ ನಾಗರಾಜ್ ನಾಯ್ಕ್ ಭಟ್ಕಳ ತೀರ್ಪುಗಾರರಾಗಿ ಸಹಕರಿಸಿದರು.ಪುತ್ತಿಲ ಕುಟುಂಬದವರಾದ ಗಂಗಾಧರ, ನಾರಾಯಣ, ವಿಶ್ವನಾಥ್, ತುಳಸಿ,ಸುಜನ್, ಧ್ಯಾನ್ ದೀಪ್ ಮತ್ತು ಮನೆಯವರು ಹಾಗೂ ರಾಮಚಂದ್ರ ಮತ್ತು ಪದ್ಮನಾಭ ಭಟ್ರಮಕ್ಕಿ ಸಹಕಾರ ನೀಡಿದರು.

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಯೋಗಿ ತೀರ್ಥೇಶ್ ಯಾದವ್ ವೀಕ್ಷಕ ವಿವರಣೆ ನೀಡಿದರು.ವಿದ್ಯಾರ್ಥಿನಿಯರು ಹಾಡು, ನೃತ್ಯ ಪ್ರಸ್ತುತ ಪಡಿಸಿದರು.ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಓಟ, ನಿಧಿ ಶೋಧ,ವಾಲಿಬಾಲ್,ಹಗ್ಗಜಗ್ಗಾಟ ಮೊದಲಾದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಆಡಿ ನಲಿದು ಅಪೂರ್ವ ಕ್ಷಣಗಳನ್ನು ಸಂಭ್ರಮಿಸಿದರು. ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.ಕ್ರೀಡಾ ಕೂಟದ ಬಳಿಕ ಸಮಾರೋಪ ಸಮಾರಂಭ ನಡೆಯಿತು. ಉಪನ್ಯಾಸಕಿ ಸಾವಿತ್ರಿ ಕೆ ವಂದಿಸಿದರು.