ಸುಳ್ಯ ಎನ್ನೆoಪಿಯುಸಿಯ ನಾಲ್ವರು ವಿದ್ಯಾರ್ಥಿಗಳಿಗೆ ಬಹುಮಾನ
ರಾಷ್ಟ್ರೀಯ ಕ್ರೀಡಾ ದಿನಾಚರಣೆ- 2023ರ ಅಂಗವಾಗಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ವತಿಯಿಂದ ನಡೆದ 5ಕಿಮೀ ರೋಡ್ ರೇಸ್ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿಗಳಾದ ಸಮೃದ್ಧ್ ಹೆಚ್ ವಿ. ಪ್ರ.ವಾಣಿಜ್ಯ ವಿಭಾಗ (ಪ್ರಥಮ ), ದಿನೇಶ ಸಿ ದ್ವಿತೀಯ ಕಲಾ ವಿಭಾಗ (ದ್ವಿತೀಯ ), ಗ್ರಿಷ್ಮ ಟಿ ಬಿ ಪ್ರಥಮ ವಾಣಿಜ್ಯ ವಿಭಾಗ (ಪ್ರಥಮ ), ಲಶ್ಮಿತ ಎಂ ಎಸ್ ಪ್ರಥಮ ವಾಣಿಜ್ಯ ವಿಭಾಗ (ದ್ವಿತೀಯ )ಸ್ಥಾನ ಗಳಿಸಿದ್ದಾರೆ.ಸಾಧಕ ಕ್ರೀಡಾಪಟುಗಳನ್ನು ಆಡಳಿತ ಮಂಡಳಿ,ಪ್ರಾoಶುಪಾಲರು,ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.