ಜಗತ್ತಿನ ಯಾವುದೇ ದೇಶಗಳಿಗೆ ಹೋದರೂ ಹಿಂದಿ ಭಾಷೆ ಗೊತ್ತಿದ್ದರೆ ಸಂಪರ್ಕ ಸಾಧಿಸಲು ಸಹಕಾರಿ. ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಕಲಿಯಬೇಕು ಎಂದು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರಾoಶುಪಾಲೆ ಹರಿಣಿ ಪುತ್ತೂರಾಯ ಅವರು ಹೇಳಿದರು. ಅವರು ಕಾಲೇಜಿನ ಹಿಂದಿ ವಿಭಾಗದಿಂದ ಆಯೋಜಿಸಿದ “ಹಿಂದಿ ದಿನಾಚರಣೆ”ಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದವಿ ವಿಭಾಗದ ಹಿಂದಿ ವಿಭಾಗದ ಮುಖ್ಯಸ್ಥರಾದ ಮಮತ ಹೆಚ್ ವಿ ಅವರು ಮಾತನಾಡಿ ನಮ್ಮ ರಾಷ್ಟ್ರ ಭಾಷೆಯಾಗಿರುವ ಹಿಂದಿಯನ್ನು ಉಳಿಸಿ, ಬೆಳೆಸಬೇಕು. ಇತರ ಭಾಷೆಗಳೊಂದಿಗೆ ಹಿಂದಿಯನ್ನು ಸೇರಿಸಿ ಅದರ ಪರಿಶುದ್ಧತೆಯನ್ನು ನಾಶ ಮಾಡಬಾರದು ಎಂದರು.
ವೇದಿಕೆಯಲ್ಲಿ ವಿ. ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ,ಕಾರ್ಯಕ್ರಮ ಸಂಯೋಜಕಿ, ಹಿಂದಿ ಉಪನ್ಯಾಸಕಿ ರಾಜೇಶ್ವರಿ ಎ. ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಅನನ್ಯ ಎಂ ಹೆಚ್ ಮತ್ತು ಬಳಗ ಪ್ರಾರ್ಥಿಸಿದರು. ಅನನ್ಯ ಎ ಸ್ವಾಗತಿಸಿ, ಹಿಂದಿ ಉಪನ್ಯಾಸಕಿ ರಾಜೇಶ್ವರಿ ಎ. ಪ್ರಾಸ್ತಾವಿಕ ನುಡಿಗಳನ್ನಾಡಿದರು.ರೋಜಾ ವಂದಿಸಿದರು. ಆಜ್ಞ ಐಪಲ್ ನಿರೂಪಿಸಿದರು.