An awareness program to prevent the spread of dengue and malaria

ಜಾಗೃತಿ ಕಾರ್ಯಕ್ರಮ

ಡೆಂಗ್ಯೂ ಮತ್ತು ಮಲೇರಿಯಾ ಖಾಯಿಲೆ ಹರಡದಂತೆ ಜಾಗೃತಿ ಕಾರ್ಯಕ್ರಮ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ನಡೆಯಿತು. ಸುಳ್ಯ ತಾಲೂಕು ಆರೋಗ್ಯಅಧಿಕಾರಿ ಪ್ರಮೀಳಾ ಅವರು ಅತಿಥಿಯಾಗಿ ಆಗಮಿಸಿ ಮಾಹಿತಿ ನೀಡುತ್ತಾ ಅಶ್ರಿತ ರೋಗ ವಾಹಕಗಳಾದ ಸೊಳ್ಳೆಗಳು  ನೀರನ್ನು ಆಶ್ರಯ ಮಾಡಿಕೊಂಡು ಸೋಂಕು ಹರಡುತ್ತವೆ.ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು.ಅನಾರೋಗ್ಯ ಕಾಡಿದಾಗ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.ನಮ್ಮ ಆರೋಗ್ಯ ರಕ್ಷಣೆಯ ಜೊತೆ ಸುತ್ತಮುತ್ತಲಿನ ಜನರ ಆರೋಗ್ಯ ರಕ್ಷಣೆ ನಮ್ಮ ಮೂಲ ಉದ್ದೇಶವಾಗಬೇಕು . ರೋಗ ನಿರೋಧಕ ಶಕ್ತಿಯ ಆಹಾರ ಸೇವಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿ ರಶ್ಮಿ,ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಉಪಸ್ಥಿತರಿದ್ದರು.ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಸ್ವಾಗತಿಸಿ, ವಂದಿಸಿದರು.ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.