NMPUC Celebrated Kannada Rajyotsava

ಕನ್ನಡದ ಮೇಲಿನ ಉತ್ಕಟ ಪ್ರೀತಿ, ಕನ್ನಡ ಪ್ರಜ್ಞೆ ಜಾಗೃತಗೊಳ್ಳಬೇಕು.—-ಬೇಬಿ ವಿದ್ಯಾ.

ಅತ್ಯಂತ ಪ್ರಾಚೀನ,ಶ್ರೀಮಂತ ನಾಡು -ನುಡಿಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆಯು ಸಮೃದ್ಧ ಗೊಂಡು ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಕನ್ನಡದ ಮನಸ್ಸುಗಳಲ್ಲಿ ಕನ್ನಡದ ಮೇಲಿನ ಅದಮ್ಯ ಪ್ರೇಮ,ಕನ್ನಡದ ಪ್ರಜ್ಞೆ ಜಾಗೃತಗೊಳ್ಳಬೇಕು. ಭಾಷೆ ಕೇವಲ ಸಂವಹನ ಸಾಧನವಲ್ಲ ನಮ್ಮ ಭಾಷೆ ಕನ್ನಡ ಸಂಸ್ಕೃತಿಯ ಪ್ರತೀಕ.ನಡೆ ನುಡಿಯಲ್ಲಿ ಕನ್ನಡ ಪ್ರೀತಿ ಮೈದಾಳಬೇಕು ಎಂದು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕಿ, ಕಾರ್ಯಕ್ರಮ ಸಂಯೋಜಕಿ ಬೇಬಿ ವಿದ್ಯಾ ಪಿ ಬಿ. ಹೇಳಿದರು. ಅವರು ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಸಾವಿತ್ರಿ ಕೆ, ಅವರು ಮಾತನಾಡಿ ವಿಶಾಲ ಕರ್ನಾಟಕದಲ್ಲಿ ನಾವೆಲ್ಲರೂ ಸುಂದರ ಭಾಷೆಯಾಗಿರುವ ಕನ್ನಡವನ್ನು ಅಭಿಮಾನದಿಂದ ಬಳಸಬೇಕು, ನಾವು ಕನ್ನಡಿಗರು ಎಂಬ ಹೆಮ್ಮೆ ನಮ್ಮಲ್ಲಿರಬೇಕು.ಎಲ್ಲರೂ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ವೇದಿಕೆಯಲ್ಲಿ ವಿಧ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿ ಅಜ್ಞ ಐಪಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿಗೆ ಪುಷ್ಪ ನಮನ ಅರ್ಪಿಸಲಾಯಿತು.

ವಿದ್ಯಾರ್ಥಿಗಳಾದ ಯಶಸ್ ಮತ್ತು ಬಳಗದವರು ಕನ್ನಡ ಗೀತೆಗಳನ್ನು ಸಾದರಪಡಿಸಿದರು. ಕಾಲೇಜಿನ ಹಿಂದಿ ಉಪನ್ಯಾಸಕಿ ರಾಜೇಶ್ವರಿ ಎ ಸ್ವಾಗತಿಸಿ, ರಾಜ್ಯ ಶಾಸ್ತ್ರ ಉಪನ್ಯಾಸಕಿ ಗೀತಾ ಎನ್ ನಿರೂಪಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಉಮಾಶ್ರೀ ಪ್ರಭು ವಂದಿಸಿದರು. ಈ ಸಂದರ್ಭದಲ್ಲಿ ಬೋಧಕ- ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.