ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ದ್ವಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸೃಜನ್ ಕೆ ಎಲ್ ಜೆ.ಇ. ಇ. ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದು ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಗಳಿಸಿಕೊಂಡಿದ್ದಾನೆ. ಮುಂದೆ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುವ ಗುರಿ ಹೊಂದಿದ್ದಾನೆ. ಈತ ಭಾಗಮಂಡಲ ತಣ್ಣಿಮನಿಯಉದ್ಯಮಿಯಾಗಿರುವ ಲೋಕೇಶ್ ಕೆ ಎಸ್ ಮತ್ತು ಗೃಹಿಣಿ ಪುಷ್ಪ ಲತಾ ಕೆ ಎಲ್ ದಂಪತಿ ಪುತ್ರ. ಪ್ರಸ್ತುತ ಸುಳ್ಯ ಹಳೆಗೇಟು ನಿವಾಸಿಯಾಗಿದ್ದಾರೆ.ಈ ಸಾಧಕನನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.