Environment Day at NMPUC Sullia

ಸುಳ್ಯ ಎನ್ನೆoಪಿಯುಸಿಯಲ್ಲಿ “ಪರಿಸರ ದಿನಾಚರಣೆ”ಯ ಅಂಗವಾಗಿ ಕಾರ್ಯಕ್ರಮ.

ಪ್ರಕೃತಿ ಮತ್ತು ಮಾನವ ಸಂಬಂಧ ಚೆನ್ನಾಗಿರಬೇಕು.ಕಾಡಿನ ನಾಶದಿಂದ ಪ್ರಾಣಿ ಪಕ್ಷಿಗಳು ನಾಡಿಗೆ ಬರುತ್ತಿವೆ.ಅವುಗಳ ರಕ್ಷಣೆ ಮಾಡಬೇಕು.ಹಾವುಗಳನ್ನು ಅವುಗಳ ಮೊಟ್ಟೆಗಳನ್ನು ರಕ್ಷಿಸಬೇಕು.ಅವುಗಳ ಸಂತತಿ ಕ್ಷೀಣವಾಗಬಾರದು ಎಂದು ಉರಗ ತಜ್ಞ ತೇಜಸ್ ಪುತ್ತೂರು ಹೇಳಿದರು.ವಿಷಕಾರಿ,ವಿಷಕಾರಿಯಲ್ಲದ ಹಾವುಗಳ ಮಾಹಿತಿ,ಮುಂಜಾಗ್ರತೆ,ಹಾವು ಕಡಿದಾಗ ತತ್ ಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಅವರು ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾoಶುಪಾಲರಾದ ಮಿಥಾಲಿ ಪಿ ರೈ ಅವರು ವಹಿಸಿ ಮಾತನಾಡಿ ಪ್ರತಿಯೊಂದು ಜೀವಿಗೂ ಬದುಕಲು ಅವಕಾಶ ಕಲ್ಪಿಸಬೇಕು,ಆಗ ನಾವು ಬದುಕಲು ಸಾಧ್ಯ.ಪರಿಸರ ರಕ್ಷಣೆ ಎಲ್ಲರೂ ಮಾಡಬೇಕು.ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ವಿಜ್ಞಾನ ಸಂಘದ ಸಂಚಾಲಕಿ ,ಸಂಸ್ಥೆಯ ಜೀವಶಾಸ್ತ್ರ ಉಪನ್ಯಾಸಕಿ ವಿನುತ ಕೆ ಎನ್,ಶ್ರೀ ಸಚಿನ್ ಪುತ್ತೂರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಪವಿತ್ರ ಮತ್ತು ಬಳಗದವರು ಪರಿಸರ ಗೀತೆ ಹಾಡಿದರು.

ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕಿ ವಿನುತ ಕೆ ಎನ್ ಸ್ವಾಗತಿಸಿ,ಪ್ರಸ್ತಾವನೆಗೈದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಆಯಿಷತ್ ಅಸ್ನ ನಿರೂಪಿಸಿ,ಸುಮಂತ್ ವಂದಿಸಿದರು.ಪದವಿ,ಪ.ಪೂ. ವಿಭಾಗದ ಬೋಧಕ,ಬೋಧಕೇತರ ವೃಂದದವರು ಉಪಸ್ಥಿತರಿದ್ದರು.