ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಹೆತ್ತವರ -ಶಿಕ್ಷಕರ ಪ್ರಥಮ ಹಂತದ ಸಭೆ ನಡೆಸಲಾಯಿತು . ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲ್ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಕಲಿಕಾ ಪ್ರಗತಿಗೆ ಪೂರಕ ಅಂಶಗಳು,ಶಿಕ್ಷಕರ ಪೋಷಕರ ಜವಾಬ್ದಾರಿ, ಮಾರ್ಗದರ್ಶನದ ಕುರಿತಾಗಿ ಮಾತನಾಡಿದರು.ಭೌತ ಶಾಸ್ತ್ರ ಉಪನ್ಯಾಸಕಿ ರಾಧಿಕಾ ಕೆ ಆರ್ ಸ್ವಾಗತಿಸಿ, ರಾಜ್ಯ ಶಾಸ್ತ್ರ ಉಪನ್ಯಾಸಕಿ ಗೀತಾ ಎನ್ ವಂದಿಸಿದರು. ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ,ಪೋಷಕರೊಂದಿಗೆ ಸಂವಾದ ನಡೆಯಿತು.