ಸುಳ್ಯ ಎನ್ನೆoಪಿಯುಸಿಯಲ್ಲಿ ಹಿಂದಿ ದಿವಸ್ ಆಚರಣೆ-2024

ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಸ. 17 ರಂದು ಹಿಂದಿ ದಿವಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ವಹಿಸಿ ಮಾತನಾಡಿ ಎಲ್ಲಾ ಭಾಷೆಗಳು ಸಮಾನ ;ನಾವು ಪ್ರತಿಯೊಂದು ಭಾಷೆಯನ್ನು ಗೌರವಿಸಬೇಕು, ವಿದ್ಯಾರ್ಥಿಗಳಲ್ಲಿ ಭಾಷೆಯನ್ನು ಕಲಿಯುವ ಆಸಕ್ತಿ ಇರಬೇಕು ಎಂದರು .

ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕಿ, ಹಿಂದಿ ಉಪನ್ಯಾಸಕಿ ರಾಜೇಶ್ವರಿ.ಎ. ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಅನನ್ಯ ಮತ್ತು ಬಳಗದವರು ಪ್ರಾರ್ಥಿಸಿ, ಶ್ರೇಯ ಸ್ವಾಗತಿಸಿದರು. ಉಪನ್ಯಾಸಕಿ ರಾಜೇಶ್ವರಿ ಎ ಪ್ರಾಸ್ತಾವಿಕ ನುಡಿಗಳನ್ನಾಡಿದರು . ವಿದ್ಯಾರ್ಥಿಗಳಾದ ಸುಗುಣ ಕಾರ್ಯಕ್ರಮ ನಿರೂಪಿಸಿ,ದಿಶನ್ ದೇವರಗುಂಡ ವಂದಿಸಿದರು.