“Celebration-2024” Program by Humanities and Commerce Association at Sullia NMPUC

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ಮಾನವಿಕ, ವಾಣಿಜ್ಯ ಸಂಘದ ವತಿಯಿಂದ ಅಂತರ್ ತರಗತಿ ವಿವಿಧ ಸ್ಪರ್ಧೆಗಳು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ವಹಿಸಿ ಮಾತನಾಡಿ ಜೀವನದಲ್ಲಿ ಕಲಿಕೆ ನಿರಂತರವಾದುದು.ಕ್ರಿಯಾಶೀಲತೆ, ಸೃಜನಶೀಲತೆ ಬಹಳ ಮುಖ್ಯ. ನಿಮ್ಮ ಸಾಧನೆಗೆ ಈ ಕಾರ್ಯಕ್ರಮ ಪ್ರೇರಣೆ ನೀಡಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಳ್ಯ ಸರಕಾರಿ ಪ್ರ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪುಷ್ಪರಾಜ್ ಕೆ ಅವರು ಮಾತನಾಡಿ ಸ್ಫೂರ್ತಿದಾಯಕ ಮಾತನ್ನು ಕೇಳಿಸಿಕೊಂಡಷ್ಟು ಅಳವಡಿಸಿ ಕೊಳ್ಳಬೇಕು, ಅಂತರ್ಯಕ್ಕೆ ವಿಷಯ ಇಳಿಯಬೇಕು, ನಮ್ಮ ಇಚ್ಛಾ ಶಕ್ತಿಗೆ ನಮ್ಮಿoದಲೇ ಸ್ಫೂರ್ತಿ ಸಿಗಬೇಕು ಎಂದು ತಿಳಿಸಿದರು.ಗೌರವ ಉಪಸ್ಥಿತರಿದ್ದ ಸಂಸ್ಥೆಯ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ನಿಮ್ಮ ಸಾಮರ್ಥ್ಯ ಹೊರಹಾಕುವಲ್ಲಿ ಪ್ರಯತ್ನಿಸಿದಾಗ ಯಶಸ್ವಿ ಬದುಕು ನಡೆಸಲು ಸಾಧ್ಯ ಎಂದರು .ಗೌರವ ಉಪಸ್ಥಿತರಿದ್ದ ಪದವಿ ವಿಭಾಗದ ಪ್ರಾಚಾರ್ಯರಾದ ಪ್ರೊ ರುದ್ರ ಕುಮಾರ್ ಎಂ ಎಂ ಅವರು ಬಹುಮಾನ ಅನಾವರಣಗೊಳಿಸಿದರು.

ವಿದ್ಯಾರ್ಥಿನಿಯರಾದ ಶರಣ್ಯ ಮತ್ತು ಬಳಗದವರು ಪ್ರಾರ್ಥಿಸಿದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ,ವಾಣಿಜ್ಯ ವಿಭಾಗದ ಸಂಚಾಲಕಿ ಸಾವಿತ್ರಿ ಕೆ ಸ್ವಾಗತಿಸಿ,ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ,ಕಾರ್ಯಕ್ರಮ ಸಂಯೋಜಕರಾದ ವಿನಯ್ ನಿಡ್ಯಮಲೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.ಸಮಾಜಶಾಸ್ತ್ರ ಉಪನ್ಯಾಸಕಿ,ಮಾನವಿಕ ವಿಭಾಗದ ಸಂಚಾಲಕಿ ರೇಷ್ಮ ಎಂ ಎಂ ವಂದಿಸಿದರು.ಉಪನ್ಯಾಸಕಿಯರಾದ ಬೇಬಿ ವಿದ್ಯಾ ಪಿ.ಬಿ., ಹರ್ಷಿತ. ಎ. ಬಿ. ನಿರೂಪಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎನ್ನೆoಸಿಯ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಮಮತ ಕೆ ವಹಿಸಿ ಮಾತನಾಡಿ ನಿಮ್ಮ ಅಂತರ್ಗತ ಪ್ರತಿಭೆ ಹೊರ ಬರುವಲ್ಲಿ ನಿಮ್ಮ ಮೌಲ್ಯಯುತ ಬದುಕು,ಶ್ರದ್ಧೆ, ಶ್ರಮ ಕಾರಣವಾಗುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿ, ನಕಾರಾತ್ಮಕ ಯೋಚನೆ ಮಾಡಬೇಡಿ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಎನ್ನೆoಸಿಯ ಬಿ. ಬಿ. ಎ.ವಿಭಾಗದ ಮುಖ್ಯಸ್ಥರಾದ ಅನಂತಲಕ್ಷ್ಮಿ ಅವರು ಉಪಸ್ಥಿತರಿದ್ದು ಆಧುನಿಕ ಯುಗದಲ್ಲಿ ಶಿಕ್ಷಣದ ಜೊತೆಗೆ ಸಮಗ್ರವಾಗಿ ತೊಡಗಿಸಿಕೊಂಡಾಗ ಶಿಕ್ಷಣದ ಸವಾಲುಗಳನ್ನು ಎದುರಿಸಲು ಸಾಧ್ಯ.ಹೊಸ ತoತ್ರಜ್ಞಾನ ಬಳಸಿ ನಿಮ್ಮ ಪ್ರತಿಭೆ ಅನಾವರಣಗೊಳಿಸಿಕೊಳ್ಳಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಉಪನ್ಯಾಸಕರಾದ ಸಾವಿತ್ರಿ ಕೆ, ರೇಷ್ಮಾ ಎಂ, ವಿನಯ್ ನಿಡ್ಯಮಲೆ ಉಪಸ್ಥಿತರಿದ್ದರು.ಉಪನ್ಯಾಸಕಿಯರಾದ ಹರ್ಷಿತ ಎ.ಬಿ. ಸ್ವಾಗತಿಸಿ,ಕಾರ್ಯಕ್ರಮ ಸಂಯೋಜಕ ವಿನಯ್ ನಿಡ್ಯಮಲೆ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕಿಯರಾದ ಬೇಬಿ ವಿದ್ಯಾ ಪಿ ಬಿ ನಿರೂಪಿಸಿ, ರಾಜೇಶ್ವರಿ ಎ ವಂದಿಸಿದರು.