Students Of Sullia NMPUC Secured the Top Position for Sullia Taluk In Science Category-2024-25

ವಿಜ್ಞಾನ ವಿಭಾಗದಲ್ಲಿ ಸುಳ್ಯ ತಾಲೂಕಿಗೆ ಅಗ್ರ ಸ್ಥಾನ ಗಳಿಸಿದ ಸುಳ್ಯದ ಪ್ರತಿಷ್ಠಿತ ಸುಳ್ಯ ಎನ್ನೆoಪಿಯುಸಿ ವಿದ್ಯಾರ್ಥಿಗಳು.

ದ್ವಿತೀಯ ಪಿಯು ಫಲಿತಾಂಶದಲ್ಲಿ  ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಸುಳ್ಯ ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿ ಅಗ್ರ ಸ್ಥಾನಿಗಳಾಗಿದ್ದಾರೆ.ಅಮೋಘ ಎಂ ಎಸ್(ಪಿ ಸಿ ಎಂ ಸಿ) 581ಅಂಕ ಗಳಿಸಿ ಪ್ರಥಮ, ಕೃತಸ್ವರ ದೀಪ್ತ ಕೆ (ಪಿ ಸಿ ಎಂ ಬಿ )577 ಅಂಕಗಳಿಸಿ ದ್ವಿತೀಯ ಸ್ಥಾನ ಗಳಿಸಿ ದಾಖಲೆಯ ಸಾಧನೆಗೈದಿದ್ದಾರೆ.ಅಮೋಘ ಎo. ಎಸ್.ಸುಳ್ಯ ಮುಳ್ಯ ನಿವಾಸಿಗಳಾದ ಉಪನ್ಯಾಸಕರಾದ ಸುಬ್ರಹ್ಮಣ್ಯ ಮತ್ತು ಎನ್ನೆoಸಿಯ ಬಿ. ಬಿ. ಎ. ವಿಭಾಗ ಮುಖ್ಯಸ್ಥರಾದ ಅನಂತ ಲಕ್ಷ್ಮಿ ದಂಪತಿ ಪುತ್ರ.ಕೃತ ಸ್ವರ ದೀಪ್ತ ಕೆ. ಸುಳ್ಯ ಶಾಂತಿನಗರ ನಿವಾಸಿಗಳಾದ ಬರಹಗಾರ, ಹಿರಿಯ ಅಧ್ಯಾಪಕ ಡಾ.ಸುಂದರ ಕೇನಾಜೆ, ಶಿಕ್ಷಕಿ ರಾಜೇಶ್ವರಿ ಎಂ. ಟಿ.ದಂಪತಿ ಪುತ್ರ. ಇಬ್ಬರು ಸಾಧಕರನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಕೆ.ವಿ ಚಿದಾನಂದ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಆಡಳಿತ ಮಂಡಳಿ, ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಪ್ರಾಚಾರ್ಯರಾದ ಮಿಥಾಲಿ ಪಿ ರೈ, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.