ಸುಳ್ಯ ಎನ್ನೆoಸಿ ಮತ್ತು ಎನ್ನೆoಪಿಯು ಕಾಲೇಜುಗಳ ಸಹಯೋಗದಲ್ಲಿ ಕೋಟಿ ಕಂಠ ಗಾಯನಕಾರ್ಯಕ್ರಮ.

ಸುಳ್ಯದ ನೆಹರು ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸಹಭಾಗಿತ್ವದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ ಕೋಟಿ ಕಂಠ ಗಾಯನ ನನ್ನ ನಾಡು ನನ್ನ ಹಾಡು ಕಾರ್ಯಕ್ರಮ ಅ.28ರಂದು ನಡೆಯಿತು. ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ವಿದ್ಯಾರ್ಥಿನಿ ನಿಶ್ವಿತ ಮತ್ತು ಬಳಗದವರು ಹಾಗೂ ಪದವಿ ವಿಭಾಗದ ವಿದ್ಯಾರ್ಥಿನಿ ಅನಘ ಮತ್ತು ತಂಡದವರು ಮತ್ತು ವಿದ್ಯಾರ್ಥಿ ವೃಂದದವರು ಹಾಡುಗಳನ್ನು ಸಾದರಪಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಂ ಬಾಲಚಂದ್ರ ಗೌಡ, ಪದವಿ ವಿಭಾಗದ ಪ್ರಾoಶುಪಾಲ ಪ್ರೊ. ರುದ್ರ ಕುಮಾರ್ ಎಂ.ಎಂ, ಪದವಿ ಪೂರ್ವ ವಿಭಾಗದ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ, ಎರಡು ಸಂಸ್ಥೆಗಳ ಬೋಧಕ -ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪದವಿ ವಿಭಾಗದ 

ಪ್ರಾoಶುಪಾಲರಾದ ಪ್ರೊ ರುದ್ರ ಕುಮಾರ್ ಎಂ ಎಂ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್ನೆoಸಿಯ ಕನ್ನಡ ವಿಭಾಗದ ಮುಖ್ಯಸ್ಥ, ಕೋಟಿ ಕಂಠ ಗಾಯನ ಕಾರ್ಯಕ್ರಮದ ನೋಡೆಲ್ ಅಧಿಕಾರಿ ಪ್ರೊ ಸಂಜೀವ ಕುದ್ಪಾಜೆ ಸಂಕಲ್ಪ ವಿಧಿ ಬೋಧಿಸಿದರು. ಪ ಪೂ ವಿಭಾಗದ ಪ್ರಾoಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ವಂದಿಸಿದರು. ಪ.ಪೂ. ವಿಭಾಗದ ಕನ್ನಡ ಉಪನ್ಯಾಸಕಿ ಕು.ಬೇಬಿ ವಿದ್ಯಾ ಪಿ.ಬಿ. ನಿರೂಪಿಸಿದರು.