Ati Utsav Program at Sullia NMPUC

ವಿದ್ಯಾರ್ಥಿಗಳಲ್ಲಿ ಸುಪ್ತ ಯೋಚನೆ, ಭಾವನೆಗಳು ಇರುತ್ತವೆ. ಗುರಿ ತಲುಪಲು ಪ್ರಯತ್ನಿಸಬೇಕು.ಮನಸ್ಸಿನ ಹತೋಟಿ ಕಾರ್ಯ ಯೋಜನೆಗೆ ಸಹಕಾರಿ. ವಿದ್ಯಾರ್ಥಿಗಳು ಆಷಾಢ ಮಾಸದ ಈ ಉತ್ಸವದಲ್ಲಿ ಅತ್ಯoತ ಕ್ರಿಯಾಶೀಲರಾಗಿ ಭಾಗವಹಿಸಿದ್ದೀರಿ.ನಮ್ಮ ಹಿರಿಯರ ಈ ಮಣ್ಣಿನ ವಿಶೇಷತೆಯನ್ನು ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಎ ಓ ಎಲ್ ಇ (ರಿ )ಸುಳ್ಯ ಇದರ ಸದಸ್ಯರಾದ ಜಗದೀಶ್ ಅಡ್ತಲೆ ಅವರು ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ಆಟಿ ಉತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಚೆನ್ನಮಣೆ ಆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ನಮ್ಮ ಕೆಲಸಗಳು ಒಂದೇ ತೆರನಾಗಿ ಇದ್ದರೆ ಆಸಕ್ತಿ, ಫಲಿತಾಂಶ ಕಡಿಮೆ ಇರುತ್ತದೆ. ಹೆಚ್ಚು ಚಟುವಟಿಕೆ, ಆಲೋಚನೆ,ಆಸಕ್ತಿಇದ್ದಾಗ ಸಂಪನ್ನರಾಗಲು ಸಾಧ್ಯ. ನಮ್ಮ ಪೂರ್ವಿಕರು ಆಷಾಢ ಮಾಸದಲ್ಲಿ ದೇಹಕ್ಕೆ ಚೈತನ್ಯ ಬರಲು ಆಹಾರ ವೈವಿದ್ಯಗಳೊಂದಿಗೆ ಆರೋಗ್ಯವಂತರಾಗುವ ಮೂಲಕ ಚೈತನ್ಯ ಪಡೆದುಕೊಳ್ಳುತ್ತಿದ್ದರು.ಶ್ರೇಷ್ಠ ಸಂಸ್ಕೃತಿಯ ಶ್ರೇಷ್ಠ ಬದುಕು ನಮ್ಮದಾಗಬೇಕು ಎಂದು ಆಶಿಸಿದರು.

ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ ಹಾಗೂ ಉಪನ್ಯಾಸಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ.ಎನ್ನೆoಸಿ ಪ್ರಾoಶುಪಾಲ ಪ್ರೊ ರುದ್ರ ಕುಮಾರ್ ಎಂ ಎಂ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಯೋಗಿ ರಜತ್ ಅಡ್ಕಾರ್ ಅವರು ಆಗಮಿಸಿ ಆಟಿ ಉತ್ಸವದ ವಸ್ತು ಪ್ರದರ್ಶನದಲ್ಲಿ ಹಿಂದಿನ ಕಾಲದ ಉಪಕರಣಗಳು,ನೃತ್ಯ,ಹಾಡು ,ಆಹಾರ ವೈವಿಧ್ಯ ಮೊದಲಾದ ಕಲಾ ಪ್ರಕಾರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಕಾಲೇಜಿನ ವಿದ್ಯಾರ್ಥಿಗಳನ್ನು 4ತಂಡಗಳನ್ನಾಗಿ ಮಾಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿನಿ ಅಭಿಜ್ಞಾ ಎನ್ ಎಂ ಪ್ರಾರ್ಥಿಸಿ, ವಿ. ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ ಸ್ವಾಗತಿಸಿ,ಹರೀಶ ಸಿ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.