ಸುಳ್ಯ ಎನ್ನೆoಪಿಯುಸಿಯಲ್ಲಿ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ. ಅನುಭವ ಮತ್ತು ಮಾಹಿತಿ ನಮ್ಮ ಜ್ಞಾನ ವೃದ್ಧಿಗೆ ಬಹಳ ಮುಖ್ಯ . ಸ್ಪರ್ಧೆ ಮಾತ್ರ ಬದುಕಲ್ಲ, ಪ್ರತಿಭೆಯನ್ನು ಗಟ್ಟಿಮಾಡಿಕೊಂಡು ಮುನ್ನಡೆಯಬೇಕು.ಸಾoಪ್ರದಾಯಿಕ ಕಲೆಯನ್ನು ಬೆಳೆಸಬೇಕು.ನಮ್ಮ ಆಲೋಚನ ಕ್ರಮ ವ್ಯವಸ್ಥೆ ಬದಲಾಗಬೇಕು. ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ, ಪಠ್ಯ ಪೂರಕ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ ಎಂದು ಸಂಶೋಧಕ, ಬರಹಗಾರ, ಶಿಕ್ಷಕ ಡಾ. ಸುಂದರ ಕೇನಾಜೆ ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾoಶುಪಾಲೆ ಮಿಥಾಲಿ ಪಿ ರೈ ಅವರು ವಿದ್ಯಾರ್ಥಿಗಳು ಸವಾಲು,ಸ್ಪರ್ಧೆಗಳನ್ನು ಎದುರಿಸಿ ಆದರೆ ವಿಚಲಿತರಾಗದಿರಿ ಸದಾ ಕ್ರಿಯಾಶೀಲರಾಗಿ ಮುನ್ನಡೆಯಿರಿ ಎಂದರು . ಗೌರವ ಉಪಸ್ಥಿತರಾಗಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಂ ಬಾಲಚಂದ್ರ ಗೌಡ ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಉಪಸ್ಥಿರಿದ್ದರು. ವಿದ್ಯಾರ್ಥಿನಿ ಆಜ್ಞಾ ಮತ್ತು ತಂಡದವರು ಆಶಯಗೀತೆ ಹಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅಂಬಿಕಾ ಕೆ ಎಸ್ ಸ್ವಾಗತಿಸಿ, ವಿದ್ಯಾರ್ಥಿನಿ ಕೆ ಸಹನ ಭಟ್ ಅತಿಥಿಗಳನ್ನು ಪರಿಚಯಿಸಿದರು.
ಉಪನ್ಯಾಸಕರಾದ ಸಾವಿತ್ರಿ ಕೆ , ರಾಜೇಶ್ವರಿ ಎ , ವಿನಯ ಎನ್ ಬಿ,ಪ್ರೇಮಲತ ಎ , ಸುಚೇತಾ ಎಂ , ಅಕ್ಷಿತಾ ಪಟೇಲ್ ಬಹುಮಾನ ಪಟ್ಟಿ ವಾಚಿಸಿದರು.ವಿದ್ಯಾರ್ಥಿಗಳಾದ ಸೋಹನ್ ಗೌಡ, ಮಾನ್ಯ ಎನ್ ಕೆ ನಿರೂಪಿಸಿದರು.ದ್ವಿ ಕಲಾ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಅಮೃತ ಹೆಚ್ ವಂದಿಸಿದರು.