College Anniversary Celebration at NMPUC Sullia

ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಾರ್ಷಿಕೋತ್ಸವ. ಒಳ್ಳೆಯ ಕೆಲಸ ಮಾಡಲು ಮನಸ್ಸು ಹದಗೊಳಿಸಬೇಕು. ಮನಸ್ಸಿನಲ್ಲಿ ಒಳ್ಳೆಯ ಕಲ್ಪನೆ ಮಾಡಿಕೊಂಡು ಗುರಿಯೆಡೆಗೆ ಸಾಗಿ, ಆಗ ಯಶಸ್ಸು ಸಾಧ್ಯ.ಪೂಜ್ಯ ಕೆವಿಜಿಯವರ ಶಿಸ್ತು ಬದ್ಧ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಲೇಖಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ ನಾರಾಯಣ ಭಟ್ ಅವರು ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಓ ಎಲ್ ಈ (ರಿ )ಉಪಾಧ್ಯಕ್ಷರಾದ ಶೋಭಾ ಚಿದಾನಂದ ಅವರು ವಹಿಸಿ ಮಾತನಾಡಿ ಕೀಳರಿಮೆ ಇಲ್ಲದೇ ಶ್ರದ್ದೆಯಿಂದ ತೊಡಗಿಸಿಕೊಳ್ಳಿ ಎಂದರು .ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ,ಕಾಲೇಜಿನ ಶೈಕ್ಷಣಿಕ ಸಲಹೆಗಾರ ಚಂದ್ರಶೇಖರ ಪೇರಾಲ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಪ್ರಾಚಾರ್ಯರಾದ ಮಿಥಾ ಲಿ.ಪಿ ರೈ,ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ,ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅಕ್ಷಯ್ ರೈ,ಆಜ್ಞಾ ಐಪಲ್, ಅಬ್ದುಲ್ ರೌಫ್, ಮನೋಜ್ ಎಸ್ ಆರ್ , ಅಂಬಿಕಾ ಕೆ ಎಸ್ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಅಭಿಜ್ಞ ಎನ್ ಎಂ ಪ್ರಾರ್ಥಿಸಿ ವಿದ್ಯಾರ್ಥಿ ನಾಯಕ ಅಕ್ಷಯ್ ರೈ ಸ್ವಾಗತಿಸಿದರು.ಪ್ರಾoಶುಪಾಲೆ ಮಿಥಾಲಿ ಪಿ ರೈ ವಾರ್ಷಿಕ ವರದಿ ವಾಚಿಸಿದರು.ದತ್ತಿನಿಧಿ,ಶೈಕ್ಷಣಿಕ ಸಾಧಕರ ಪಟ್ಟಿಯನ್ನು ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ.ವಾಚಿಸಿದರು ,ಸಂದೇಶ ಪತ್ರ,ಕ್ರೀಡಾ ಸಾಧಕರ ಪಟ್ಟಿಯನ್ನು ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ,ಸಾಂಸ್ಕೃತಿಕ, ಕ್ರೀಡಾ ವಿಜೇತರ ಪಟ್ಟಿಯನ್ನು ಉಪನ್ಯಾಸಕ ವಿನಯ ಎನ್ ಬಿ, ಮುಖ್ಯ ಅತಿಥಿಗಳ ಪರಿಚಯವನ್ನು ಉಪನ್ಯಾಸಕಿ ನಯನ ಎಂ ವಾಚಿಸಿದರು.ವಿದ್ಯಾರ್ಥಿ ನಾಯಕಿ ಆಜ್ಞ ಐಪಲ್ ವಂದಿಸಿ, ವಿದ್ಯಾರ್ಥಿಗಳಾದ ಪಿ ಆರ್ ಸ್ಮಿತಾ,ಕೃತ ಸ್ವರ ದೀಪ್ತ ಕೆ ನಿರೂಪಿಸಿದರು.