ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಸುಳ್ಯ ಎನ್. ಎಂ.ಪಿ.ಯು. ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 137ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳು 129ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 94.16/..ಅತ್ಯುತ್ತಮ ಫಲಿತಾಂಶ ದಾಖಲಾಗಿದೆ.ಒಟ್ಟು33 ಮಂದಿ ಡಿಸ್ಟಿಂಕ್ಷನ್, 79ಮಂದಿ ಪ್ರಥಮ ದರ್ಜೆ, ಹಾಗೂ 14ಮಂದಿ ದ್ವಿತೀಯ ದರ್ಜೆಯ ಅಂಕ ಗಳನ್ನು ಗಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ 75ಮಂದಿ ಹಾಜರಾದ ವಿದ್ಯಾರ್ಥಿಗಳಲ್ಲಿ 68ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 90.16/. ವಾಣಿಜ್ಯ ವಿಭಾಗದ 48ವಿದ್ಯಾರ್ಥಿಗಳಲ್ಲಿ 47ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ .98/.ಮತ್ತು ಕಲಾ ವಿಭಾಗದಲ್ಲಿ 14ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ. 100ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದ ಅಮೋಘ ಎಂ ಎಸ್ 581ವಾಣಿಜ್ಯ ವಿಭಾಗದ ಕೃಷ್ಣ ವಂಶಿ ಮತ್ತು ಮೇಘ ಡಿ 575 ಅಂಕಗಳು ಮತ್ತು ಕಲಾ ವಿಭಾಗದ ಮಣಿಕಂಠ 537 ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ.ಅತ್ಯುತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರು,ಆಡಳಿತ ಮಂಡಳಿ, ಪ್ರಾoಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
