Life Skills Training at Sullia NMPUC
ಸ್ವ ಶಿಸ್ತು, ಸಮಯ ನಿರ್ವಹಣೆ,ನೀತಿ -ನಿಯಮಗಳು,ಒತ್ತಡ ನಿವಾರಣೆ,ಜೀವನದಲ್ಲಿ ಯಶಸ್ಸು ಗಳಿಸುವುದು ಹೇಗೆ ಎಂಬುದನ್ನು ಮುಂಬೈ ಐ ಐ ಟಿ ಯ ಹಿರಿಯ ವಿದ್ಯಾರ್ಥಿ,ಇಂಜಿನಿಯರ್,ಪ್ರಾಧ್ಯಾಪಕ ಡಾ..ಎ ಎನ್ ಕುಮಾರ್ ತಿಳಿಸಿದರು.ಅವರು ಸುಳ್ಯ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಪ್ರ. ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾoಶುಪಾಲರಾದ ಮಿಥಾಲಿ ಪಿ ರೈ ವಹಿಸಿದ್ದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಾವಿತ್ರಿ ಕೆ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ ನಿರೂಪಿಸಿ, ವಂದಿಸಿದರು.
Life Skills Training at Sullia NMPUC Read More »