August 2023

Inauguration of Student Union and Pratibha Purasak at Sullia NMPUC.

ಕೆ ವಿ ಜಿಯವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾದಾನ ಮಾಡಿ ಸಮಾಜದ ಏಳಿಗೆಗೆ ಶ್ರಮಿಸಿದವರು .ಗೆಲುವಿಗೆ ವಿದ್ಯೆ ಕಾರಣ.ಇದು ಅಂತರ್ಗತ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಯೋಗ ವಿದ್ಯೆಯನ್ನು ಅನುಸರಿಸುವ ಮೂಲಕ ನಾವು ಉನ್ನತಿ ಸಾಧಿಸಬಹುದು.ಸಾಮಾಜಿಕ ಸಮಾನತೆ,ದೇಶ ಪ್ರೇಮ,ಭಾಷಾ ಪ್ರೇಮ,ಬಡವರ ಬಗ್ಗೆ ಕಾಳಜಿ ಹೊಂದಬೇಕು.ಆಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ.ಎಂದು ಸ್ನೇಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಚಂದ್ರಶೇಖರ ದಾಮ್ಲೆ ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ಮುಖ್ಯ ಅತಿಥಿಯಾಗಿ […]

Inauguration of Student Union and Pratibha Purasak at Sullia NMPUC. Read More »

Health Information Program at Sullia NMPUC

ಹೆಣ್ಣು ಮಕ್ಕಳ ಆರೋಗ್ಯ ಮತ್ತು ವೈಯಕ್ತಿಕ ಸ್ವಚ್ಛತೆ ಯ ಅರಿವು ಮೂಡಿಸುವ ಕಾರ್ಯಕ್ರಮ ಜೂನ್ 16ರಂದು ಸುಳ್ಯ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ನಡೆಯಿತು. ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಅವರು ಮಾತನಾಡಿ ಹದಿಹರೆಯದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಾಳಜಿಯ ಅಗತ್ಯವನ್ನು ತಿಳಿಸಿದರು .ಪ್ರಾoಶುಪಾಲೆ ಹರಿಣಿ ಪುತ್ತೂರಾಯ ಅವರು ಮಾರ್ಗದರ್ಶನ ನೀಡಿದರು.ಉಪನ್ಯಾಸಕಿಯರಾದ ಬೇಬಿ ವಿದ್ಯಾ ಪಿ.ಬಿ ,ರಾಜೇಶ್ವರಿ ಎ , ಹರ್ಷಿತ ಎ.ಬಿ., ಗೀತಾ ಎನ್ , ಪ್ರೇಮಲತ ಎ,ಉಮಾಶ್ರೀ ಪ್ರಭು ಉಪಸ್ಥಿತರಿದ್ದರು.

Health Information Program at Sullia NMPUC Read More »

Academic study visit by Sullia NMPUC students

ಪ್ರಗತಿಪರ ಕೃಷಿಕರಾದ ತಿರುಮಲೇಶ್ವರ ಭಟ್ ಕುರಿಯಾಜೆ ಇವರ ಕೃಷಿ ಭೂಮಿಗೆ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನ ಭೇಟಿ ಹಮ್ಮಿಕೊಳ್ಳಲಾಗಿತ್ತು. 20 ವರ್ಷದಿಂದ ಕೃಷಿ ಭೂಮಿಯಲ್ಲಿ ವಿಶಿಷ್ಟ ಮಾದರಿಯ ಅಡಿಕೆ ನಾಟಿ ವಿಧಾನ, ದೇಶ ವಿದೇಶದ ಹಣ್ಣಿನ ಗಿಡಗಳು, ಹಸು ಸಾಕಾಣಿಕೆ, ಸುತ್ತಮುತ್ತಲಿನ ಆವರಣದಲ್ಲಿ ಬೆಳೆಸಿದ ಉದ್ಯಾನವನ,ಸುಮಾರು 300 ಬಗೆಯ ಕಳ್ಳಿ ಸಸ್ಯಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಲಾಯಿತು . ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರ ಮಾರ್ಗದರ್ಶನದಲ್ಲಿ ಈ

Academic study visit by Sullia NMPUC students Read More »

World Environment Day celebration at Sullia NMPUC

ನಾವು ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಬದುಕಬೇಕು. ಭೂಮಿಯಲ್ಲಿ ತಾಪಮಾನ ಹೆಚ್ಚುತ್ತಿದ್ದು,ದಟ್ಟ ಕಾಡಿನಲ್ಲಿ ಗಿಡಗಳು ಸುಟ್ಟು ಹೋಗುತ್ತಿದೆ , ಪರಿಸರ ಕಾಳಜಿ ಪ್ರಾಯೋಗಿಕವಾಗಿ ಆಗಬೇಕಿದೆ.ಪ್ಲಾಸ್ಟಿಕ್ ನಿರ್ಮೂಲನೆಯಾಗಬೇಕು ಎಂದು ಸುಳ್ಯ ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಸಂಜೀವ ಕುದ್ಪಾಜೆ ಹೇಳಿದರು. ಅವರು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಅಭಿವೃದ್ಧಿಯ ನೆಪದಲ್ಲಿ ಪರಿಸರ ಹಾಳಾಗುತ್ತಿದೆ. ಶುದ್ಧ ಆಹಾರ, ಗಾಳಿ,ಪರಿಸರವನ್ನು ಶುಭ್ರವಾಗಿಟ್ಟು

World Environment Day celebration at Sullia NMPUC Read More »

Orientation Program at NMPUC Sullia

ವ್ಯಕ್ತಿತ್ವ ವೃದ್ಧಿಸಲು ಸಾಮರ್ಥ್ಯ ಮುಖ್ಯ -ಪ್ರೊ ಎಂ ಬಾಲಚಂದ್ರ ಗೌಡ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಾಧನೆಗೈಯಲು ಉತ್ತಮ ಸಾಮರ್ಥ್ಯವನ್ನು ಮೊದಲು ಗಳಿಸಬೇಕು.ಆ ಮೂಲಕ ನಿರಂತರ ಸಾಧನೆಯೊಂದಿಗೆ ಯಶಸ್ಸು ಗಳಿಸಬಹುದು ಎಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಂ ಬಾಲಚಂದ್ರ ಗೌಡ ಅವರು ಹೇಳಿದರು.ಡಾ.ಕುರುಂಜಿ ವೆಂಕಟ್ರಮಣ ಗೌಡರ ದೂರದೃಷ್ಟಿಯ ಫಲವಾಗಿ ಸಮಾಜದ ಏಳಿಗೆಯಾಗಿದೆ,ಸುಳ್ಯದಲ್ಲಿ ಶಿಕ್ಷಣದ ಕ್ರಾಂತಿಯಾಗಿದೆ ಎoದು ಅವರು ತಿಳಿಸಿದರು. ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಜೂನ್ 1ರಂದು ಪ್ರ. ಪಿಯುಸಿ

Orientation Program at NMPUC Sullia Read More »