August 2023

Kanda Donji Day program by Sullia NMPUC

ಇಲ್ಲಿನ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ಕಲಾ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ‘ಕಂಡಡೊಂಜಿ ದಿನ’ ಕ್ರೀಡಾ ಕೂಟವು ಉದ್ಯಮಿ, ಸಾಮಾಜಿಕ ಮುಂದಾಳು ಮನಮೋಹನ ಪುತ್ತಿಲರ ‘ಪುತ್ತಿಲ ಫಾರ್ಮ್’ ಕಾoತಮಂಗಲದ ಗದ್ದೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಉದ್ಘಾಟಕರಾದ ಮನ ಮೋಹನ ಪುತ್ತಿಲರು ಮಾತನಾಡಿ ನಮ್ಮ ಪೂರ್ವಜರು ಶ್ರಮ ಜೀವಿಗಳಾಗಿ ಕೃಷಿ,ಧರ್ಮ, ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ್ದಾರೆ. ಯುವ ಜನಾಂಗ ಅದನ್ನು ಮುಂದುವರಿಸಿಕೊಂಡು ಹೋದಾಗ ನಮ್ಮ ಶ್ರೀಮಂತ ರೈತ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾ […]

Kanda Donji Day program by Sullia NMPUC Read More »

Information Program about Measles Rubella disease and ill effects of using tobacco products at Sullia NMPUC

ದಡಾರ ರುಬೆಲ್ಲಾ ಖಾಯಿಲೆ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ಎನ್ನೆoಸಿಯ ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲ ದೀಪ್ ಉಪನ್ಯಾಸ ನೀಡುತ್ತಾ ಅತೀ ಆಸೆಗೆ ಜನರು ಬಲಿ ಬಿದ್ದು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.ಅದರ ವಿರುದ್ಧ ಜಾಗೃತಿ ಅಗತ್ಯ. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ವಯೋ ಸಹಜ

Information Program about Measles Rubella disease and ill effects of using tobacco products at Sullia NMPUC Read More »

World Yoga Day Celebration at Sullia NMPUC.

ಯೋಗ ಶ್ರೇಷ್ಠ ವಿದ್ಯೆಯಾಗಿದ್ದು ನಿರಂತರ ಅಭ್ಯಾಸ,ಕ್ರಮಬದ್ಧ ಪಾಲನೆ ಮಾಡುವುದರ ಮೂಲಕ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಯೋಗ ನಮ್ಮ ಜೀವನದ ಭಾಗವಾಗಬೇಕು.ಆ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಸುಳ್ಯ ಕೆವಿಜಿ ಆಯುರ್ವೇದ ಆಸ್ಪತ್ರೆ ಮತ್ತು ಮಹಾವಿದ್ಯಾಲಯದ ಅಗಥ ತಂತ್ರ ವಿಭಾಗದ ಪ್ರಾಧ್ಯಾಪಕ ಡಾ. ಅವಿನಾಶ್ ಅವರು ಹೇಳಿದರು. ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು

World Yoga Day Celebration at Sullia NMPUC. Read More »

Legal information program at Sullia NMPUC

ವ್ಯಕ್ತಿ ಹುಟ್ಟಿನಿಂದ ಸಾಯುವ ತನಕ ಫೋಸ್ಕೋ ಕಾಯಿದೆ ನೆರವಿಗೆ ಬರುತ್ತದೆ. ನಮ್ಮ ಭವಿಷ್ಯ ರೂಪಿಸುವಲ್ಲಿ ನಾವು ಅತ್ಯoತ ಜಾಗರೂಕರಾಗಬೇಕು.ಸೈಬರ್ ಅಪರಾಧ ಹೆಚ್ಚಾಗುತ್ತಿದ್ದು 18ವರ್ಷದೊಳಗಿನ ಮಕ್ಕಳು ವೈಯಕ್ತಿಕ ಜಾಗ್ರತೆ ವಹಿಸಿಕೊಳ್ಳಬೇಕು.ಮಾದಕ ವ್ಯಸನ ಉಂಟು ಮಾಡುವ ದುಷ್ಪರಿಣಾಮಗಳ ಬಗ್ಗೆ ನಮ್ಮಲ್ಲಿ ಅರಿವು ಇರಬೇಕು ಅಲ್ಲದೇ ಮೊಬೈಲ್ ಬಳಕೆಯನ್ನು ಎಚ್ಚರದಿಂದ ಉಪಯೋಗಿಸಬೇಕು.ಪರವಾನಿಗೆ,ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಬಾರದು.ಜನರಿಗೆ ವೈಯಕ್ತಿಕ ಸುರಕ್ಷತೆ ಬಹಳ ಮುಖ್ಯ.ಅಸಹಾಯಕರಿಗೆ, ದುರ್ಬಲರಿಗೆ ಸಹಾಯ ಮಾಡುತ್ತ ಮನುಷ್ಯತ್ವ ದಿಂದ ನಾವು ಬಾಳಬೇಕು.ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸುಳ್ಯದ ಪೊಲೀಸ್ ಠಾಣೆಯ

Legal information program at Sullia NMPUC Read More »

Workshop by Department of Commerce at Sullia NMPUC.

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಬ್ಯಾಂಕ್ ಡ್ರಾಫ್ಟ್ ಬರೆಯುವ ವಿಧಾನದ ಕುರಿತಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಂದರೂ ಕೆಲವು ಅನಿವಾರ್ಯ ಸಂದರ್ಭದಲ್ಲಿ ನಾವು ಬ್ಯಾಂಕ್ ವ್ಯವಹಾರಗಳಿಗೆ ಬ್ಯಾಂಕ್ ಡ್ರಾಫ್ಟ್ ಗಳನ್ನು ಭರ್ತಿ ಮಾಡಬೇಕಾಗುತ್ತದೆ.ನಾವು ಈ ಕೌಶಲ್ಯ ಬೆಳೆಸಿಕೊಳ್ಳುವುದರಿಂದ ಆತ್ಮವಿಶ್ವಾಸ ನಮ್ಮಲ್ಲಿ ವೃದ್ಧಿಯಾಗುತ್ತದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕಿಯರು ಮತ್ತು ವಾಣಿಜ್ಯ ಸಂಘದ ಸಂಚಾಲಕರಾದ ಸಾವಿತ್ರಿ

Workshop by Department of Commerce at Sullia NMPUC. Read More »

Inauguration of the Science Model Competition Program at Sullia NMPUC

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ “DISCOVER SCI”ವಿಜ್ಞಾನ ಮಾದರಿ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಗಳಾಗಿ,ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಮಾಲಿನಿ ಕೆ.ಅವರು ಮಾತನಾಡಿ ಪ್ರತಿಯೊಬ್ಬರಿಗೂ ಬದುಕುವ ಕಲೆ ಮುಖ್ಯ.ದೈನಂದಿನ ಜೀವನದಲ್ಲಿ ವಿಜ್ಞಾನದ ಬಳಕೆಯಾಗುತ್ತಿದೆ. ನಮ್ಮ ಜ್ಞಾನವನ್ನು ವೃದ್ಧಿಗೊಳಿಸಲು ನಮ್ಮನ್ನು ನಾವು ಪ್ರಶ್ನಿಸುವ ಗುಣ ಹೊಂದಿ, ಅವಲೋಕನ, ಕುತೂಹಲ, ಆತ್ಮವಿಶ್ವಾಸ, ಕಠಿಣ ಪರಿಶ್ರಮ ಗುಣಗಳ

Inauguration of the Science Model Competition Program at Sullia NMPUC Read More »

Talents Day celebration at Sullia NMPUC

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಟ್ಯಾಲೆಂಟ್ಸ್ ಡೇ ಕಾರ್ಯಕ್ರಮ ಕೆವಿಜಿ ಆಡಿಟೋರಿಯಂ ನಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಪ್ರತಿಭಾ ಪ್ರದರ್ಶನವನ್ನು ನೀಡಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ.ಎಂ,ಹರೀಶ ಸಿ,ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ವಿದ್ಯಾರ್ಥಿಗಳು ಹಾಡು,ನೃತ್ಯ,ಪ್ರಹಸನ ವಿವಿಧ ವಿನೋದಾವಳಿಗಳನ್ನು ಸಾದರಪಡಿಸಿದರು. ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಅಂಬಿಕಾ ಸ್ವಾಗತಿಸಿ,ಪ್ರಥಮ ವಿಜ್ಞಾನ ವಿಭಾಗದ ಅಮೋಘ ಎಂ ಎಸ್,ಆಯಿಷತ್ ಅಸ್ನ ಕಾರ್ಯಕ್ರಮ

Talents Day celebration at Sullia NMPUC Read More »

Inauguration of Tally Certificate Course at Sulya NNEPUC and Lecture program on G. S. T.

ಆಧುನಿಕ ಯುಗದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಟ್ಯಾಲಿ ಕೋರ್ಸ್ ಕಲಿಯುವುದು ಬಹಳ ಮುಖ್ಯ. ಅರ್ಥ ವ್ಯವಸ್ಥೆ ಯಲ್ಲಿ ತೆರಿಗೆ ಸುಧಾರಣೆಯ ಮುಖ್ಯ ಭಾಗವಾಗಿ ಜಿ ಎಸ್ ಟಿ ಯನ್ನು ಜಾರಿಗೊಳಿಸಲಾಯಿತು ಜಿ ಎಸ್ ಟಿ ಯನ್ನು ಅನುಷ್ಠಾನಗೊಳಿಸುವ ಮೂಲಕವಾಗಿ ತೆರಿಗೆ ಕಳ್ಳತನ, ತೆರಿಗೆ ಸಂಗ್ರಹ ವೃದ್ಧಿ, ಹಳೆಯ ತೆರಿಗೆ ಪದ್ಧತಿಯ ಲೋಪದೋಷ ಸರಿಪಡಿಸುವುದು, ಏಕ ರೂಪ ತೆರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು ಮೂಲ ಉದ್ದೇಶವಾಗಿತ್ತು. ಜಿ ಎಸ್ ಟಿ ಬಂದ ಮೇಲೆ ಬಹಳಷ್ಟು ಸುಧಾರಣೆಯಾಗಿದೆ ಎಂದು ನೆಹರು ಮೆಮೋರಿಯಲ್ ಕಾಲೇಜಿನ

Inauguration of Tally Certificate Course at Sulya NNEPUC and Lecture program on G. S. T. Read More »

Personality Development Program at Sullia NMPUC

ವಿದ್ಯಾರ್ಥಿಗಳು ಅರಳುವ ಹೂವುಗಳು. ನಿಮ್ಮಲ್ಲಿ ಕೌಶಲ್ಯ ಇದೆ. ನಿಮ್ಮಲ್ಲಿ ಬದುಕಿನ ಭರವಸೆಯನ್ನು ಈಡೇರಿಸಿ ಕೊಳ್ಳಲು ವ್ಯಕ್ತಿತ್ವ ಬಹಳ ಮುಖ್ಯ.ನಾವು ಇನ್ನೊಬ್ಬರನ್ನು ನೋಡಿ ಅನುಸರಿಸುತ್ತೇವೆ. ಸ್ವಂತಿಕೆಯಿಂದ ಆಲೋಚಿಸಿ ಕಾರ್ಯಮಗ್ನರಾಗಬೇಕು. ಆಗ ನಮಗೆ ಸೋಲಾಗುವುದಿಲ್ಲ. ಎಂದು ಸುಳ್ಯ ಎನ್ನೆoಸಿಯ ಕನ್ನಡ ಉಪನ್ಯಾಸಕಿ,ತರಬೇತುದಾರರಾದ ಡಾ. ಅನುರಾದ ಕುರುಂಜಿ ಅವರು ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಅವರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳನ್ನು ನಡೆಸಿಕೊಟ್ಟರು.ಕಾರ್ಯಕ್ರಮದ

Personality Development Program at Sullia NMPUC Read More »

Inaugural program of Youth Red Cross Unit at Sullia NMPUC

ಕೇವಲ ಹಣವಿದ್ದರೆ ಸಾಲದು,ಸಮಾಜ ಸೇವೆ ಮಾಡಲು ಮನಸ್ಸು ಬೇಕು.ನಾವು ಸೇವೆಯ ಮಹತ್ವವನ್ನು ತಿಳಿದು ಸಮಾಜಕ್ಕೆ ಹೇಳಿಕೊಡುವುದು ನಮ್ಮ ಜವಾಬ್ದಾರಿ.ರಕ್ತ ದಾನ ಪವಿತ್ರ ಸೇವೆ.ಪ್ರಪಂಚದ ಹೆಚ್ಚು ಸದಸ್ಯತ್ವ ಹೊಂದಿರುವ ಸಂಸ್ಥೆ ರೆಡ್ ಕ್ರಾಸ್.ಈ ಸೇವಾ ಸಂಸ್ಥೆಯಲ್ಲಿ ಎಲ್ಲರೂ ಸದಸ್ಯತ್ವ ಪಡೆದುಕೊಂಡು ಸೇವೆ ಸಲ್ಲಿಸಿ ಎಂದು ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಧಾಕರ ರೈ ಪಿ.ಬಿ.ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು

Inaugural program of Youth Red Cross Unit at Sullia NMPUC Read More »