ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಮನಸ್ಸಿನ ಏಕಾಗ್ರತೆ, ಅರೋಗ್ಯವಂತರಾಗಿರಲು ಅನುಸರಿಸಬೇಕಾದ ಧ್ಯಾನ, ಮುದ್ರಗಳನ್ನು ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳಾದ ಸಂಪ್ರೀತ್ ಉಪನ್ಯಾಸ ನೀಡಿದರು. ದೀಪಾ, ಅಮೃತ ಪ್ರಾತ್ಯಕ್ಷಿಕೆ ಮೂಲಕ ಯೋಗ ನಡೆಸಿಕೊಟ್ಟರು.ಶ್ರೀನಿವಾಸ್ ಸಹಕರಿಸಿದರು.ಪ್ರಾಚಾರ್ಯರಾದ ಮಿಥಾಲಿ ಪಿ ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಉಪಸ್ಥಿತರಿದ್ದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ. ನಿರೂಪಿಸಿದರು. ಉಪನ್ಯಾಸಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


