ಕಾರ್ಗಿಲ್ ಹೋರಾಟದಲ್ಲಿ ಭಾರತೀಯ ಸೈನ್ಯ ತೋರಿದ ದಿಟ್ಟ ಹೋರಾಟದ ಫಲವಾಗಿ ನಾವು ಜಯವನ್ನು ಸಾಧಿಸುವಂತಾಯಿತು.ದುರ್ಗಮ ಪರ್ವತ ಶ್ರೇಣಿಗಳಲ್ಲಿ ನಮ್ಮ ಸೈನಿಕರು ತೋರಿದ ಶೌರ್ಯ, ತ್ಯಾಗ ಬಲಿದಾನಗಳ ಕಾರಣದಿಂದಾಗಿ ನಮ್ಮ ದೇಶಕ್ಕೆ ಜಯವಾಯಿತು ಎಂದು ಸುಳ್ಯ ಶ್ರೀ ಶಾರದಾ ಪಿಯು ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಪ್ರಸನ್ನ ನಿಡ್ಯಮಲೆ ಹೇಳಿದರು .ಅವರು ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ತಿಳಿಸಿದರು . ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾoಶುಪಾಲರಾದ ಮಿಥಾಲಿ ಪಿ ರೈ ಅವರು ಮಾತನಾಡಿ ಕಾರ್ಗಿಲ್ ಯುದ್ಧ ದಲ್ಲಿ ನಮ್ಮ ದೇಶದ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ನಮ್ಮಸೇನಾ ಪಡೆ ನಿರಂತರ ಹೋರಾಟದ ಮೂಲಕ ಜಯ ತಂದು ಕೊಟ್ಟಿತು ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು,ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಉಪಸ್ಥಿತರಿದ್ದರು.ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಲಾಯಿತು.
ವಿದ್ಯಾರ್ಥಿನಿಯರಾದ ಅದ್ವೈತ ಮತ್ತು ಬಳಗದವರು ದೇಶಭಕ್ತಿ ಗೀತೆ ಹಾಡಿದರು.ಇತಿಹಾಸ ಉಪನ್ಯಾಸಕಿ ಸೌಮ್ಯ ಎಂ ಎಸ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾರ್ಥಿಗಳಿಗೆ ಪಿ ಬಿ ನಿರೂಪಿಸಿ, ಅರ್ಥ ಶಾಸ್ತ್ರ ಉಪನ್ಯಾಸಕ ವಿನಯ್ ನಿಡ್ಯಮಲೆ ವಂದಿಸಿದರು.


