ಧ್ಯಾನ ತರಬೇತಿ ಶಿಬಿರ

ಸಮಚಿತ್ತದಿಂದ ಮಾನಸಿಕ ದೃಢತೆಯನ್ನು ಸಾಧಿಸಬೇಕು ಮತ್ತು  ಆ  ಮೂಲಕವಾಗಿ ಏಕಾಗ್ರತೆ, ಸಂಯಮವನ್ನು ಹೊಂದಬೇಕು. ಆ ನಿಟ್ಟಿನಲ್ಲಿ ಧ್ಯಾನ ನಡೆಸುವುದು ಅತ್ಯಂತ ಸೂಕ್ತ  ಎಂದು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅವರು ಹೇಳಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ  Heartfulness ಸಂಸ್ಥೆಯಿಂದ 3 ದಿನಗಳ ಕಾಲ ಏರ್ಪಡಿಸಲಾದ ಧ್ಯಾನ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಅವರು ನುಡಿದರು.

Heartfulness ಸಂಸ್ಥೆಯ ಶ್ರೀಮತಿ ನಳಿನಿ ಅವರು ಧ್ಯಾನದ ಅಗತ್ಯತೆ ಮತ್ತು ಅದನ್ನು ನಡೆಸುವ ಕ್ರಮಗಳ  ಬಗ್ಗೆ ವಿವರವಾಗಿ ಮಾತನಾಡಿದರು. ನಂತರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಶಿಬಿರ ನಡೆಯಿತು. ಉಪನ್ಯಾಸಕ ಶ್ರೀ ಕಿಶೋರ್ ಅವರು ಸ್ವಾಗತಿಸಿ ವಂದಿಸಿದರು.