NM PUC

ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ಎನ್ನೆoಪಿಯುಸಿಗೆ ಅವಳಿ ಪ್ರಶಸ್ತಿ

ಸೆ 3ರಂದು ಪ.ಪೂ ಶಿಕ್ಷಣ ಇಲಾಖೆ ಮತ್ತು ನೆಹರು ಮೆಮೋರಿಯಲ್ ಪ.ಪೂ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಎನ್ನೆ oಸಿ ಕ್ರೀಡಾoಗಣದಲ್ಲಿ ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಹುಡುಗರ ಮತ್ತು ಹುಡುಗಿಯರ ತಂಡ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹುಡುಗರ ತಂಡದಲ್ಲಿ ಚಂದನ್ (ನಾಯಕ ), ಸುಜಿತ್, ತೇಜಸ್, ಸೃಜನ್, ಕಿಶನ್, ಧೀಮಂತ್ ಹಾಗೂ ಹುಡುಗಿಯರ ವಿಭಾಗದಲ್ಲಿ ಎಂ ಟಿ ತೃಪ್ತಿ (ನಾಯಕಿ ), ಪುಣ್ಯಶ್ರೀ, ನಿಶ್ಮಿತಾ, ರೋಜಾ, […]

ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ಎನ್ನೆoಪಿಯುಸಿಗೆ ಅವಳಿ ಪ್ರಶಸ್ತಿ Read More »

ಸುಳ್ಯ ಎನ್ನೆoಪಿಯುಸಿಯ ಅಬ್ದುಲ್ ರೌಫ್ ಜಿಲ್ಲಾ ಮಟ್ಟದ ಫುಟ್ ಬಾಲ್ ಪಂದ್ಯಾಟಕ್ಕೆ ಆಯ್ಕೆ

ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಪದವಿ ಪೂರ್ವ ವಿಭಾಗದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಬ್ದುಲ್ ರೌಫ್ ಅತುತ್ತಮ ಪ್ರದರ್ಶನ ನೀಡಿದ್ದು ಸೆಪ್ಟೆಂಬರ್ 5 ರಂದು ಮಂಗಳೂರಿನ ಯೆನಪೋಯ ಪಿಯು ಕಾಲೇಜಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.ಈ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ, ಪ್ರಾoಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

ಸುಳ್ಯ ಎನ್ನೆoಪಿಯುಸಿಯ ಅಬ್ದುಲ್ ರೌಫ್ ಜಿಲ್ಲಾ ಮಟ್ಟದ ಫುಟ್ ಬಾಲ್ ಪಂದ್ಯಾಟಕ್ಕೆ ಆಯ್ಕೆ Read More »

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋ ರಿಯಲ್ ಪಪೂ ಕಾಲೇಜಿನ ಹುಡುಗರ ತಂಡ  ಚಾಂಪಿಯನ್

ಸ.ಪ.ಪೂ ಕಾಲೇಜು ಪಂಜ ಇಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಹುಡುಗರ ತಂಡ  ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತಂಡದಲ್ಲಿದ್ದ ಆಟಗಾರರು: ಮನು ಶ್ರೀನಿವಾಸ್ ನಾಯ್ಕ್ .ದ್ವಿ. ಕಲಾ ವಿಭಾಗ (ನಾಯಕ ), ಆದಿತ್ಯ ಶಿವಕುಮಾರ್ ಚಲಿಯಾರ್ ದ್ವಿತೀಯ. ಕಲಾ ವಿಭಾಗ, ಪ್ರಥಮ ಕಲಾ ವಿಭಾಗದ ಮನೋಜ್ ಎಸ್ ಆರ್ , ತುಕಾರಾಮ್ ಮಣಿಗೆನಪ್ಪ ಮೋಟೆ , ನಾಗಭೂಷಣ್ ಕುಪ್ಪಯ್ಯ ಗೊಂಡ್, ನಾಗರಾಜ್ ನಾರಾಯಣ್ ನಾಯ್ಕ್ , ಪ್ರಥಮ ವಾಣಿಜ್ಯ

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋ ರಿಯಲ್ ಪಪೂ ಕಾಲೇಜಿನ ಹುಡುಗರ ತಂಡ  ಚಾಂಪಿಯನ್ Read More »

ಸುಳ್ಯ ಎನ್ನೆoಪಿಯುಸಿಯ ಶುಹಿಬ್ ಸೈಪುದ್ಧಿನ್ ಗೆ ಬಹುಮಾನ.

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ  ವತಿಯಿಂದ ನಡೆದ ‘Com Instania’ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಸುಳ್ಯ ದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶುಹಿಬ್ ಸೈಫುದ್ಧಿನ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ, ಪ್ರಾoಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

ಸುಳ್ಯ ಎನ್ನೆoಪಿಯುಸಿಯ ಶುಹಿಬ್ ಸೈಪುದ್ಧಿನ್ ಗೆ ಬಹುಮಾನ. Read More »

ಸುಳ್ಯ ಎನ್ನೆoಪಿಯುಸಿಯಲ್ಲಿ tally ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ tally ಸರ್ಟಿಫಿಕೇಟ್ ಕೋರ್ಸ್ ನ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.Tally ಅತ್ಯಂತ ಉಪಯುಕ್ತಕಾರಿ ಕೋರ್ಸ್ ಆಗಿದ್ದು ಈ ತರಬೇತಿ ಪಡೆದವರಿಗೆ ಬಹಳಷ್ಟು ಬೇಡಿಕೆ ಇದ್ದು ವೃತ್ತಿ ಜೀವನದಲ್ಲಿ, ಸ್ವ ಉದ್ಯೋಗದಲ್ಲಿ ಸಹಕಾರಿಯಾಗುತ್ತದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಎನ್ನೆoಸಿಯ ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿಭಾಗ ಮುಖ್ಯಸ್ಥೆ ರಮ್ಯ ಎಸ್ ಕೆ ತಿಳಿಸಿದರು. ಅವರು tally ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ

ಸುಳ್ಯ ಎನ್ನೆoಪಿಯುಸಿಯಲ್ಲಿ tally ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ Read More »

ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗ ಮಯೂರಿ ಕಲಾ ಶಾಲೆ ಪ್ರಸ್ತುತ ಪಡಿಸಿದ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದಲ್ಲಿ ಪ್ರಶಸ್ತಿ.

ಸುಳ್ಯ ಎನ್ನೆoಪಿಯುಸಿಯ ವಿದ್ಯಾರ್ಥಿಗಳಿಗೆ ಬಹುಮಾನ ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗ ಮಯೂರಿ ಕಲಾ ಶಾಲೆ ಪ್ರಸ್ತುತ ಪಡಿಸಿದ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ನಡೆಸಿದ ‘ಜನ ಗಣ ಮನ’ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಅಭಿಜ್ಞಾ ಎನ್ ಎಂ ದ್ವಿತೀಯ ಸ್ಥಾನ, ಸುದ್ದಿ ಸಮೂಹ ಸಂಸ್ಥೆ ಮತ್ತು ಸಜ್ಜನ ಪ್ರತಿಷ್ಟಾನ ಬೀಜದ ಕಟ್ಟೆ ಇವರು ಆಯೋಜಿಸಿದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ

ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗ ಮಯೂರಿ ಕಲಾ ಶಾಲೆ ಪ್ರಸ್ತುತ ಪಡಿಸಿದ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದಲ್ಲಿ ಪ್ರಶಸ್ತಿ. Read More »

ಸುಳ್ಯ ಎನ್ನೆoಪಿಯುಸಿಯ ಪ್ರೀತಿಕಾಳಿಗೆ ಅಭಿನಂದನೆ

ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಅಂಗವಾಗಿ ಸುಳ್ಯ ಸ ಪ ಪೂ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಪ್ರೀತಿಕಾ ಎಂ ಎಸ್ 601/625ಇವರನ್ನು ಅಭಿನಂದಿಸಲಾಯಿತು. ಈ ವಿದ್ಯಾರ್ಥಿನಿ ಸ ಪ್ರೌಢ ಶಾಲೆ ದುಗಲಡ್ಕ ಇಲ್ಲಿ ವ್ಯಾಸಂಗ ಮಾಡಿದ್ದು ಪ್ರಸ್ತುತ ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಉಚಿತ ಶಿಕ್ಷಣ

ಸುಳ್ಯ ಎನ್ನೆoಪಿಯುಸಿಯ ಪ್ರೀತಿಕಾಳಿಗೆ ಅಭಿನಂದನೆ Read More »

ಸುಳ್ಯ ಎನ್ನೆ oಪಿಯುಸಿಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಧ್ವಜಗೀತೆ, ರಾಷ್ಟ್ರ ಗೀತೆ ಮತ್ತು ವಂದೇ ಮಾತರಂ ಗೀತೆ ಬರೆಯುವ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸುಳ್ಯದ ನೆಹರು ಮೆಮೋ ರಿಯಲ್ ಪಪೂ ಕಾಲೇಜಿನಲ್ಲಿ ನಡೆಯಿತು.  ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧೆಗಳಲ್ಲಿ ಎಲ್ಲರೂ ಭಾಗವಹಿಸುವುದರ ಮೂಲಕ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ಮಾಡಿಕೊಡುತ್ತದೆ ಎಂದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ

ಸುಳ್ಯ ಎನ್ನೆ oಪಿಯುಸಿಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ. Read More »

ರಾಷ್ಟ್ರ ಧ್ವಜ ಬಳಕೆ ಮಾಹಿತಿ ಮತ್ತು ವಿತರಣಾ ಕಾರ್ಯಕ್ರಮ

75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ದ ಅಂಗವಾಗಿ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.12ರಂದು ರಾಷ್ಟ್ರ ಧ್ವಜವನ್ನು ಕಾಲೇಜಿನಲ್ಲಿ ವಿತರಣೆ ಮಾಡಲಾಯಿತು.ಸಂಸ್ಥೆಯ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಕಾರ್ಯಕ್ರಮದ ಪ್ರಾಮುಖ್ಯತೆ ತಿಳಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ದಾಮೋದರ ಪಿ,ಬೋಧಕ -ಬೋಧಕೇತರ ವೃಂದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಷ್ಟ್ರ ಧ್ವಜ ಬಳಕೆ ಮಾಹಿತಿ ಮತ್ತು ವಿತರಣಾ ಕಾರ್ಯಕ್ರಮ Read More »

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಯನ್ನು ಆಗಸ್ಟ್ 10ರಂದು ಆಚರಿಸಲಾಯಿತು.ಕಾಲೇಜಿನ ಪ್ರಾoಶುಪಾಲರಾದ ಶ್ರೀಮತಿ ಹರಿಣಿ ಪುತ್ತೂರಾಯ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ನಮಗೆ ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯ.ವಿದ್ಯಾರ್ಥಿಗಳು ಆರೋಗ್ಯವಂತರಾಗಿದ್ದು  ಕಲಿಕೆಯಲ್ಲೂ ಚೆನ್ನಾಗಿ ತೊಡಗಿಸಿಕೊಳ್ಳಬೇಕಾದರೆ  ಸ್ವಚ್ಛತೆ ಕಡೆ ಗಮನ ನೀಡಬೇಕು ಎಂದರು.ಜಂತು ಹುಳು ನಾಶಕದ ಮೂಲಕ ಅವುಗಳ ನಿವಾರಣೆ ಮಾಡಬಹುದು ಎಂದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಂತು ಹುಳು ನಾಶಕ ಮಾತ್ರೆಯನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಬೋಧಕ -ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ Read More »