NM PUC

NMPUC Students Participated in District Level Competition-2025

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ )ಮತ್ತು ಗಾಂಧಿನಗರ ಪ ಪೂ ಕಾಲೇಜಿನ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಹಬೀಬ್ ಜರಾರ್ ಮತ್ತು ಪ್ರ ವಾಣಿಜ್ಯ ವಿಭಾಗದ ಇಸ್ಮಾಯಿಲ್ ನಶ್ವಿರ್ ಇವರು ಅತ್ಯುತ್ತಮ ಪ್ರದರ್ಶನ ನೀಡಿ ಮೂಡಬಿದಿರೆಯ ರೋಟರಿ ಪ ಪೂ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ.ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾoಶುಪಾಲರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

NMPUC Students Participated in District Level Competition-2025 Read More »

ಸುಳ್ಯ ಎನ್ನೆoಪಿಯುಸಿಯಲ್ಲಿ “ಆಟಿ  -2025″ಕಾರ್ಯಕ್ರಮ

ಸುಳ್ಯ ಎನ್ನೆoಪಿಯುಸಿಯಲ್ಲಿ “ಆಟಿ  -2025″ಕಾರ್ಯಕ್ರಮ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ  ಆಟಿ -2025ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಹಿಸಿದ್ದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ ಸ್ವಾಗತಿಸಿ, ವಂದಿಸಿದರು.ಎನ್ನೆoಸಿ ಬಿ ಎಸ್ ಡಬ್ಲ್ಯೂ ವಿಭಾಗದ ಮುಖ್ಯಸ್ಥೆ ಶೋಭಾ,ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ದಿವ್ಯ ತೀರ್ಪುಗಾರರಾಗಿ ಆಗಮಿಸಿದ್ದರು.ವಿದ್ಯಾರ್ಥಿಗಳ 4 ಹೌಸ್ ಗಳಿಗೆ ನಡೆದ ಸ್ಪರ್ಧೆಗಳಲ್ಲಿ ಆಟಿ ಆಚರಣೆಗಳನ್ನು ವಿದ್ಯಾರ್ಥಿಗಳು ತಿಳಿಸಿದರು. ಆಟಿ ವಿಶೇಷ ಆಹಾರ ಖಾದ್ಯಗಳು,ಅವುಗಳ ವಿಶೇಷತೆಯನ್ನು ವಿದ್ಯಾರ್ಥಿಗಳು ಪರಿಚಯಿಸಿದರು. ಕಾರ್ಯಕ್ರಮ

ಸುಳ್ಯ ಎನ್ನೆoಪಿಯುಸಿಯಲ್ಲಿ “ಆಟಿ  -2025″ಕಾರ್ಯಕ್ರಮ Read More »

ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕೆಸರು ಗದ್ದೆ ಕೂಟ” ಕಾರ್ಯಕ್ರಮ-2025

ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕೆಸರು ಗದ್ದೆ ಕೂಟ” ಕಾರ್ಯಕ್ರಮ.ಇಲ್ಲಿನ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ಮಾನವಿಕ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ‘ಕೆಸರು ಗದ್ದೆ ಕೂಟ ‘ ಸಿಸನ್ 2 ಕ್ರೀಡಾ ಕೂಟವು ಜುಲೈ 24ರಂದು ಬೂಡು ಶ್ರೀ ಭಗವತಿ ಗದ್ದೆ,ಕೇರ್ಪಳ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾದ ಪನ್ನೆ ಬೀಡು ಭಗವತಿ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ ಅವರು ಮಾತನಾಡಿ ನಮ್ಮ ಕೃಷಿ ಪ್ರಧಾನ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು. ಯುವ ಜನಾಂಗ ಅದನ್ನು ಮುಂದುವರಿಸಿಕೊಂಡು

ಸುಳ್ಯ ಎನ್ನೆoಪಿಯುಸಿ ವತಿಯಿಂದ “ಕೆಸರು ಗದ್ದೆ ಕೂಟ” ಕಾರ್ಯಕ್ರಮ-2025 Read More »

Environmental Awareness Program At NMPUC-2025

ಸುಳ್ಯ ಎನ್ನೆoಪಿಯುಸಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ.ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ವತಿಯಿಂದ ಪರಿಸರ ಜಾಗೃತಿ ಯಾನ ಪರಿಸರ ಗೀತೆ ಗಾಯನ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.ಮನುಷ್ಯ ತನ್ನ ದುರಾಸೆಗೆ ಪರಿಸರ ವನ್ನು ವಿನಾಶದ ಅಂಚಿಗೆ ತಳ್ಳ ಬಾರದು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕಾರ್ಯಕ್ರಮ ಉದ್ಘಾಟಕರಾದ ಎ ಓ ಎಲ್ ಇ (ರಿ)ಕಾರ್ಯದರ್ಶಿ ಕೆವಿ ಹೇಮನಾಥ್ ಅವರು ಹೇಳಿದರು.ಕ ಸಾ ಪ ಅಧ್ಯಕ್ಷರಾದ ಚಂದ್ರ ಶೇಖರ್

Environmental Awareness Program At NMPUC-2025 Read More »

INFORMATION PROGRAM-2025

ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ಸಂಘ ಮತ್ತು ಮಾನವಿಕ ಸಂಘದ ವತಿಯಿಂದ ಕಲಾ,ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆ ಜಾಗೃತಿ ಮತ್ತು ಶಿಕ್ಷಣ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೋತಿಲಾಲ್ ಒಸ್ವಾಲ್ ಕಂಪೆನಿ ಇದರ ಬಿಸಿನೆಸ್ ಪಾರ್ಟ್ನರ್ ಮೋಹಿತ್ ಎ ಎಸ್ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಾವಿತ್ರಿ ಕೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ  ಬೇಬಿ ವಿದ್ಯಾ.ಪಿ ಬಿ., ಮಾನವಿಕ ಸಂಘದ ಸಂಚಾಲಕಿ ರೇಷ್ಮಾ ಎಂ ಎಂ, ವಾಣಿಜ್ಯ

INFORMATION PROGRAM-2025 Read More »

Talents Day Celebration at Sullia NMPUC 2025

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ವತಿಯಿಂದ ಟ್ಯಾಲೆಂಟ್ಸ್ ಡೇ ಕಾರ್ಯಕ್ರಮ ಕಾಲೇಜು ಆಡಿಟೋರಿಯಂನಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ಮಾತನಾಡಿ ಅವಕಾಶವನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಪ್ರತಿಭಾ ಪ್ರದರ್ಶನ ನೀಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ,ಉಪನ್ಯಾಸಕ ವೃಂದದವರು-ಬೋಧಕೇತರ ಸಿಬ್ಬಂದಿ ಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಹಾಡು,ನೃತ್ಯ ವಿವಿಧ ವಿನೋದಾವಳಿಗಳನ್ನು ಸಾದರಪಡಿಸಿದರು.ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸುಗುಣ ಸ್ವಾಗತಿಸಿ,ಹೆಡ್ ಬಾಯ್ ಯಶವಂತ್ ಕುಶಾಲಪ್ಪ ವಂದಿಸಿದರು.ಪ್ರಥಮ

Talents Day Celebration at Sullia NMPUC 2025 Read More »

Anti-Drug Day Celebration 2025

ಜೂನ್ 26ರ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.ಮಾದಕ ವಸ್ತುಗಳ ಉಪಯೋಗ ಮತ್ತು ಅಕ್ರಮ ಕಳ್ಳ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನದ ಅಂಗವಾಗಿ ನಶಾ ಮುಕ್ತ ಭಾರತ ಅಭಿಯಾನ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿ ಕ್ಷೇಮಾಧಿಕಾರಿ,ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಬೋಧಿಸಿದರು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ ಕೆ ವಿ ಚಿದಾನಂದ, ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ಪದವಿ ವಿಭಾಗದ ಪ್ರಾಚಾರ್ಯರಾದ ಡಾ ರುದ್ರ ಕುಮಾರ್,ಪಿಯು ವಿಭಾಗದ ಪ್ರಾಚಾರ್ಯರಾದ ಮಿಥಾಲಿ ಪಿ

Anti-Drug Day Celebration 2025 Read More »

 Student Council Inauguration And Felicitation

ನಮ್ಮ ಸ್ಪಷ್ಟ ಗುರಿಯನ್ನು ನಿರ್ಧರಿಸಿ ಆ ದಿಕ್ಕಿನತ್ತ ಮುನ್ನಡೆಯಬೇಕಾದರೆ ಕಠಿಣ ಪರಿಶ್ರಮ, ಆಸಕ್ತಿ,ಸಾಧಿಸಲು ಬೇಕಾದ  ಸಮರ್ಪಣಾ ಗುಣ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ವಿಷಯದ ಕುರಿತಾದ ಶೋಧ, ಜ್ಞಾನ ಮೊದಲಾದ ಗುಣ ನಮ್ಮಲ್ಲಿ ಇರಬೇಕು.ಎಂದು 2024ರಲ್ಲಿ ಯು ಪಿ ಎಸ್ ಸಿ 2 ನಡೆಸಿದ ಸಿ ಡಿ ಎಸ್ ಪರೀಕ್ಷೆ ಯಲ್ಲಿ ಅಖಿಲ ಭಾರತೀಯ ಮಟ್ಟದಲ್ಲಿ 14ನೇ ರ್ಯಾoಕ್ ಗಳಿಸಿ ನೌಕ ಸೇನಾ ಅಕಾಡೆಮಿಗೆ ಆಯ್ಕೆಯಾದ 2018-20ನೇ ಬ್ಯಾಚ್ ನ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪ್ರದ್ಯುಮ್ನ ಯು ವಿ

 Student Council Inauguration And Felicitation Read More »

Environment Day at NMPU College-2025

ಪರಿಸರ  ಭೂಮಿಯ ಮೇಲಿನ ಅಮೂಲ್ಯ ಸಂಪತ್ತು. ನಾವು ಉಸಿರಾಡುವ ಜಗತ್ತು ಹಸಿರಿನಿಂದ ಕೂಡಿರಬೇಕು. ಪರಿಸರದ ಒಡನಾಡಿಗಳು ನಾವು ಎಂದುಸುಳ್ಯ ಎನ್ನೆoಸಿಯ ಸಸ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪೆಲ್ತಡ್ಕ ತಿಳಿಸಿದರು.ಅವರು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ಪರಿಸರ ದಿನದ ಅಂಗವಾಗಿ ನಡೆದ ಗಿಡಗಳ ಕಸಿಕಟ್ಟುವಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.ಹಾಗೂ ಕಸಿಕಟ್ಟುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾoಶುಪಾಲರಾದ ಮಿಥಾಲಿ ಪಿ ರೈ ಅವರು ವಹಿಸಿ ಮಾತನಾಡಿ ಪರಿಸರ ಸಂರಕ್ಷಣೆ

Environment Day at NMPU College-2025 Read More »

YOGA DAY At NMPU College-2025

ಸುಳ್ಯದ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ  ಯೋಗ ದಿನಾಚರಣೆಯನ್ನು ಜೂನ್ 21ರಂದು ಹಮ್ಮಿಕೊಳ್ಳಲಾಗಿತ್ತು.ಮನಸ್ಸಿನ ಏಕಾಗ್ರತೆ, ಅರೋಗ್ಯವಂತರಾಗಿರಲು ಅನುಸರಿಸಬೇಕಾದ ಧ್ಯಾನ, ಮುದ್ರಗಳನ್ನು ವಿದ್ಯಾರ್ಥಿಗಳಾದ ಜೀವನ್ ಪವಾರ್, ಅನಘ  ಸೋನಾ,ಜೀವಿತ ಪಿ ಎಂ,ಒಲಿವಿಯ,ಮನ್ವಿತಾ,ಯಶವಂತ್, ಅಬೂಬಕರ್ ಶಮಾಜ್ ಪ್ರಾತ್ಯಕ್ಷಿಕೆ ಮೂಲಕ ನಡೆಸಿಕೊಟ್ಟರು.ಅಧ್ಯಕ್ಷತೆ ವಹಿಸಿದ್ದಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ಮಾತನಾಡಿ ಪ್ರಾಚೀನ ಹಿನ್ನಲೆ ಇರುವ ಯೋಗವನ್ನು ದೈನಂದಿನ ಅಭ್ಯಾಸ ಕ್ರಮವಾಗಿ ರೂಢಿಸಿಕೊಳ್ಳಬೇಕು. ಮಾನಸಿಕ, ದೈಹಿಕವಾಗಿ ನಾವು ಸದೃಢರಾಗಲು ಯೋಗ ಸಹಕಾರಿ ಎಂದರು.  ವಿದ್ಯಾರ್ಥಿನಿ ಶ್ರೇಯ ಎಂ ಜಿ ನಿರೂಪಿಸಿ,ವಂದಿಸಿದರು.ಕಾಲೇಜಿನ

YOGA DAY At NMPU College-2025 Read More »