Annual Sports Meet 2025

ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನ. 20 ರಂದು ನಡೆಯಿತು. ಧ್ವಜಾರೋಹಣವನ್ನು ಎಓಎಲ್ಇ(ರಿ)ಉಪಾಧ್ಯಕ್ಷೆ ಶೋಭಾ ಚಿದಾನಂದ ಅವರು ನೆರವೇರಿಸಿ ಮಾತನಾಡಿ ನಮ್ಮ ಕೆಲಸದ ಮೇಲೆ ನಮಗೆ ಗಮನ,ಶ್ರದ್ಧೆ ಬೇಕು. ಇಂದಿನ ಕ್ರೀಡಾಕೂಟ ಯಶಸ್ವಿ ಯಾಗಲಿ ಎಂದು ಶುಭ ಹಾರೈಸಿದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇಲ್ಲಿನ ಮೂಳೆ ಮತ್ತು ಕೀಲು ರೋಗ ವಿಭಾಗದ ಪ್ರಾಧ್ಯಾ ಪಕ, ವಿಭಾಗ ಮುಖ್ಯಸ್ಥರು ಹಾಗೂ ಪ್ರಸಿದ್ಧ ವೈದ್ಯರಾದ ಡಾ ರಂಗನಾಥ್ ಎನ್ ಅವರು ಮಾತನಾಡಿ ಹಿಂದೆ ಜನರು ತಮ್ಮ ಆರೋಗ್ಯವನ್ನು  ಉಳಿಸಿಕೊಳ್ಳುತ್ತಿದ್ದರು.ದೈಹಿಕ ಆರೋಗ್ಯಕ್ಕೆ ಕ್ರೀಡೆ ಬಹಳ ಮುಖ್ಯ. ವಿದ್ಯಾರ್ಥಿಗಳು ಒಳ್ಳೆಯ ಅಭಿರುಚಿಯಾಗಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು.

ಸೋಲು ಗೆಲುವಿನ ಪಾಠವಾಗಬೇಕು ಎಂದು ಆಶಿಸಿದರು.ವೇದಿಕೆಯಲ್ಲಿ  ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಪದವಿ ವಿಭಾಗದ ಪ್ರಾಚಾರ್ಯರಾದ ಡಾ ರುದ್ರ ಕುಮಾರ್ ಎಂ ಎಂ. ಗೌರವ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಚಾರ್ಯರಾದ  ಮಿಥಾಲಿ ಪಿ ರೈ,ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ, ಉಪಸ್ಥಿತರಿದ್ದರು. ಎನ್ನೆoಸಿಯ ದೈ. ಶಿ ನಿರ್ದೇಶಕರಾದ ಲೆಫ್ಟಿಂನೆಂಟ್ ಸೀತಾರಾಮ ಎಂ ಡಿ,ಕೆವಿಜಿಎಂಸಿಎಚ್ ಇಲ್ಲಿನ ಉದ್ಯೋಗಿ ತೀರ್ಥಶ್ ಯಾದವ್  ಕ್ರೀಡಾಕೂಟಕ್ಕೆ ಸಹಕರಿಸಿದರು. ಶರಣ್ಯ ಮತ್ತು ಬಳಗದವರು ಪ್ರಾರ್ಥಿಸಿದರು. ಪ್ರಾಚಾರ್ಯರಾದ ಮಿಥಾಲಿ ಪಿ ರೈ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಕೌಶಿಕ್ ಜಿ ಪ್ರತಿಜ್ಞಾ ವಿಧಿ ಬೋಧಿಸಿದರು.ಉಪನ್ಯಾಸಕಿ  ಸಾವಿತ್ರಿ ಕೆ ಮತ್ತು ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ. ನಿರೂಪಿಸಿ, ಹೆಡ್ ಬಾಯ್ ಯಶವಂತ್ ಕುಶಾಲಪ್ಪ ವಂದಿಸಿದರು