ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಹಿಸಿದ್ದರು.ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆ ಇಲ್ಲಿನ ಭೌತ ಶಾಸ್ತ್ರ ಉಪನ್ಯಾಸಕ ಮತ್ತು ಎನ್ ಡಿ ಎ ಸಂಯೋಜಕ ಜೋಷ್ಟಮ್ ಅವರು ಕಾರ್ಯಾಗಾರ ನಡೆಸಿಕೊಟ್ಟರು.ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ ಇ ಟಿ,ನೀಟ್,ಜೆ ಇ ಇ , ಎನ್ ಡಿ ಎ ಕುರಿತು ಮಾಹಿತಿ ನೀಡಿದರು.ಪರೀಕ್ಷೆ ಗೆ ಪೂರ್ವ ತಯಾರಿಯ ಜೊತೆಗೆ ,ಏಕಾಗ್ರತೆ,ಆತ್ಮ ವಿಶ್ವಾಸ,ಶ್ರದ್ದೆ ಕೂಡ ಮುಖ್ಯ ಎಂದರು.ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ, ವಿಜ್ಞಾನ ವಿಭಾಗದ ಸಂಯೋಜಕಿ ಸುಚೇತಾ ಎಂ ಉಪಸ್ಥಿತರಿದ್ದರು.ಸಂಸ್ಥೆಯ ಭೌತ ಶಾಸ್ತ್ರ ಉಪನ್ಯಾಸಕಿ, ವಿಜ್ಞಾನ ವಿಭಾಗದ ಸಂಯೋಜಕಿ ಸುಚೇತಾ ಎಂ ಸ್ವಾಗತಿಸಿ, ರಸಾಯನ ಶಾಸ್ತ್ರ ಉಪನ್ಯಾಸಕಿ ಅಶ್ವಿತಾ ವಂದಿಸಿದರು. ಗಣಿತ ಶಾಸ್ತ್ರ ಉಪನ್ಯಾಸಕಿ ಸುಷ್ಮಾ ನಿರೂಪಿಸಿದರು.ಜೀವಶಾಸ್ತ್ರ ಉಪನ್ಯಾಸಕ ರಕ್ಷಿತ್ ಸಹಕರಿಸಿದರು.


