News & Events

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿ ಓಣಂ ಆಚರಣೆ

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿ ಓಣಂ ಪ್ರಯುಕ್ತ ಪೂಕಳಂ ಹಾಕಿ ಹಬ್ಬವನ್ನು ಆಚರಿಸಲಾಯಿತು

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿ ಓಣಂ ಆಚರಣೆ Read More »

ಸೇವಾ ಬದ್ಧತೆಯಿಂದ ಹತ್ತು ಹಲವು ಪಾತ್ರಗಳನ್ನುನಿರ್ವಹಿಸುವವರು ದಾದಿಯರು – ಶ್ರೀಮತಿ ಪ್ರೇಮ ಬಿ ಎಂ

 ಸೇವಾ ಬದ್ಧತೆಯಿಂದ  ಹತ್ತು ಹಲವು ಪಾತ್ರಗಳನ್ನುನಿರ್ವಹಿಸುವವರು ದಾದಿಯರು  – ಶ್ರೀಮತಿ ಪ್ರೇಮ  ಬಿ ಎಂ ದಾದಿಯರು ಕೇವಲ ಅನಾರೋಗ್ಯದ ಸಂದರ್ಭದಲ್ಲಿ ಮಾತ್ರ ಸೇವೆಗೆ ಸೀಮಿತರಲ್ಲ. ಅವರು ವಿವಿಧ ಪಾತ್ರಗಳನ್ನು ಆರೋಗ್ಯಕ್ಷೇತ್ರದಲ್ಲಿ ಸಮರ್ಥವಾಗಿ ನಿಭಾಯಿಸುವವರು. ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವ ಇವರು ಓರ್ವ ಆಡಳಿತಗಾರಳಾಗಿ , ಶಿಕ್ಷಕಿಯಾಗಿ , ಮಾರ್ಗದರ್ಶಕಳಾಗಿ ಹೀಗೆ ಹತ್ತು ಹಲವು ಪಾತ್ರಗಳನ್ನು ಸೇವಾ ಬದ್ಧತೆಯಿಂದ ನಿರ್ವಹಿಸುತ್ತಾ ಸಮಾಜದ ಆರೋಗ್ಯವನ್ನು ವರ್ಧಿಸುವ ಕಾರ್ಯಗಳನ್ನು ಮಾಡುವವರು  ಎಂದು ಕೆವಿಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರೇಮ  ಬಿ

ಸೇವಾ ಬದ್ಧತೆಯಿಂದ ಹತ್ತು ಹಲವು ಪಾತ್ರಗಳನ್ನುನಿರ್ವಹಿಸುವವರು ದಾದಿಯರು – ಶ್ರೀಮತಿ ಪ್ರೇಮ ಬಿ ಎಂ Read More »

ವ್ಯಕ್ತಿತ್ವ ವಿಕಸನ- ತರಬೇತಿ ಕಾರ್ಯಕ್ರಮ

 ತನ್ನ ಗುರಿ ಸಾಧಿಸಬೇಕಾದರೆ ವಿದ್ಯಾರ್ಥಿಯು ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.ತನ್ನನ್ನು ಅಧೋಗತಿಗೆ ತಳ್ಳುವ ಹವ್ಯಾಸ , ಸಹವಾಸ ಮತ್ತು ಆಲೋಚನೆಗಳಿನ್ದ ಹೊರಬಂದು  ಧನಾತ್ಮಕವಾಗಿ ಆಲೋಚನೆ ಮಾಡುತ್ತಾ  ಆರೋಗ್ಯಕರ ಬೆಳವಣಿಗೆಯನ್ನು ಕಾಣುವಂತಾಗಬೇಕು  ಎಂದು  ನೆಹರು ಮೆಮೋರಿಯಲ್ ಪದವಿ   ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಹೇಳಿದರು. ಅವರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ಮಾನವಿಕ ಸಂಘ   ವಿದ್ಯಾರ್ಥಿಗಳಿಗೆ  ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾಲೇಜಿನ  ಕಲಾ ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು

ವ್ಯಕ್ತಿತ್ವ ವಿಕಸನ- ತರಬೇತಿ ಕಾರ್ಯಕ್ರಮ Read More »

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ವಿದ್ಯಾರ್ಥಿಗಳ ತಂಡ ಸುಳ್ಯ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ವಿದ್ಯಾರ್ಥಿಗಳಾದ ದ್ವಿತೀಯ ಕಲಾ ವಿಭಾಗದ ಯಜ್ನೇಶ್, ಪ್ರಥಮ ವಾಣಿಜ್ಯ ವಿಭಾಗದ ರಮೇಶ್ ಮತ್ತು ವಿಜ್ಞಾನ ವಿಭಾಗದ ಸೃಜನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿಯವರು ಮತ್ತು ಪ್ರಾಂಶಪಾಲರು ಅಭಿನಂದಿಸಿರುತ್ತಾರೆ.

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ Read More »

ವಿಶ್ವ ಸಾಕ್ಷರತಾ ದಿನಾಚರಣೆ

ಶಿಕ್ಷಣ ಮನುಷ್ಯನಿಗೆ  ಯೋಜನಾಬದ್ಧವಾಗಿ ಯೋಚಿಸುವ ಶಕ್ತಿಯನ್ನು ನೀಡಬೇಕು ಮತ್ತು ಶಿಕ್ಷಣದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮನುಷ್ಯ ಬೆಳೆಯಬೇಕು ಎಂದು  ನೆಹರು ಮೆಮೋರಿಯಲ್ ಪದವಿ   ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಅವರು ಹೇಳಿದರು. ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ಮಾನವಿಕ ಸಂಘ ಆಯೋಜಿಸಿದ್ದ ವಿಶ್ವ ಸಾಕ್ಷರತಾ ದಿನಾಚರಣೆಯ   ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.  ನಮಗೆ ನಿಜವಾಗಿ ಬೇಕಾಗಿರುವುದು ಬದುಕಿನ ಶಿಕ್ಷಣ, ಅಂಕಗಳ ಆಕಾಂಕ್ಷೆ ಮತ್ತು ಸ್ಪರ್ಧೆಯನ್ನು ಮೀರಿ ಬೆಳೆದಾಗ ಮತ್ತು ನಮ್ಮ ಯೋಚನಾ ಲಹರಿ

ವಿಶ್ವ ಸಾಕ್ಷರತಾ ದಿನಾಚರಣೆ Read More »

Know GST – Talk by Prof RudraKumar, NMC

ಅತ್ಯಂತ ಕ್ಲಿಷ್ಟವಾಗಿದ್ದ ತೆರಿಗೆ ವ್ಯವಸ್ಥೆಯನ್ನು  ಸರಳಗೊಳಿಸುವ ಉದ್ದೇಶಹೊಂದಿರುವ ಹೊಸ ತೆರಿಗೆ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತರಲಾಯಿತು ಮತ್ತು ಹಳೆಯ ವ್ಯವಸ್ಥೆಯಿಂದ ಹೊಸ  ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದರೆ ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅತೀ ಅಗತ್ಯ  ಎಂದು ನೆಹರು ಪದವಿ ಕಾಲೇಜಿನ ವಾಣಿಜ್ಯ  ವಿಭಾಗದ ಉಪನ್ಯಾಸಕರಾದ  ಪ್ರೊ. ರುದ್ರಕುಮಾರ್     ಹೇಳಿದರು. ಅವರು ಕಾಲೇಜಿನ  ವಾಣಿಜ್ಯ  ಸಂಘ ಆಯೋಜಿಸಿದ್ದ  GST  ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.  ಹೊಸ ತೆರಿಗೆ ವ್ಯವಸ್ಥೆಯ ಚಿಂತನೆ ಯಾಕೆ ಬಂತು, ಅದನ್ನು ಯಾವ ರೀತಿಯಾಗಿ ಅಳವಡಿಸುವ ಪ್ರಯತ್ನಗಳು

Know GST – Talk by Prof RudraKumar, NMC Read More »

Teacher’s day at NMPUC- September 5, 2019

ಗುರುವಿನ ಮಾರ್ಗದರ್ಶನದಿಂದ ಸ್ಪಷ್ಟ ಗುರಿಯನ್ನು ಹೊಂದಿ ವಿದ್ಯಾರ್ಥಿಗಳು ಮುನ್ನಡೆದಾಗ ವಿದ್ಯೆ ಎಂಬ ಸಂಪತ್ತನ್ನು ದಕ್ಕಿಸಿಕೊಳ್ಳಬಹುದು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಬದುಕು ನಮಗೆ ಆದರ್ಶ ಎಂದು  ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಹೇಳಿದರು. ಅವರು ಕಾಲೇಜಿನ ವಿದ್ಯಾರ್ಥಿ ಸಂಘ ಆಯೋಜಿಸಿದ್ದ  ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಪನ್ಯಾಸಕರೆಲ್ಲರೂ ಹಾಡು, ನೃತ್ಯವನ್ನು ಸಾದರಪಡಿಸಿದರು.

Teacher’s day at NMPUC- September 5, 2019 Read More »

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಜಿಲ್ಲಾಮಟ್ಟಕ್ಕೆ

ಸರಕಾರಿ ಪ. ಪೂ ಕಾಲೇಜು ಗುತ್ತಿಗಾರು ಇಲ್ಲಿ ಸೆಪ್ಟೆಂಬರ್ 4 ರಂದು  ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆಯೋಜಿಸಲ್ಪಟ್ಟ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ, ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಹುಡುಗರ ವಾಲಿಬಾಲ್ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತದೆ. ಹರ್ಷಿತಾ ಗೌಡ ಉತ್ತಮ ಹೊಡೆತಗಾರ  ಪ್ರಶಸ್ತಿ ಗಳಿಸಿದ್ದು , ಮೊಹಮ್ಮದ್ ಸುಹೈಬ್ ಪಂದ್ಯಾಟದ ಸರ್ವ ಶ್ರೇಷ್ಠ ಆಟಗಾರ ಎಂದು ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ತಂಡವನ್ನು ಅಭಿನಂದಿಸಿರುತ್ತಾರೆ.

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಜಿಲ್ಲಾಮಟ್ಟಕ್ಕೆ Read More »

ಧ್ಯಾನ ತರಬೇತಿ ಶಿಬಿರ

ಸಮಚಿತ್ತದಿಂದ ಮಾನಸಿಕ ದೃಢತೆಯನ್ನು ಸಾಧಿಸಬೇಕು ಮತ್ತು  ಆ  ಮೂಲಕವಾಗಿ ಏಕಾಗ್ರತೆ, ಸಂಯಮವನ್ನು ಹೊಂದಬೇಕು. ಆ ನಿಟ್ಟಿನಲ್ಲಿ ಧ್ಯಾನ ನಡೆಸುವುದು ಅತ್ಯಂತ ಸೂಕ್ತ  ಎಂದು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅವರು ಹೇಳಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ  Heartfulness ಸಂಸ್ಥೆಯಿಂದ 3 ದಿನಗಳ ಕಾಲ ಏರ್ಪಡಿಸಲಾದ ಧ್ಯಾನ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಅವರು ನುಡಿದರು. Heartfulness ಸಂಸ್ಥೆಯ ಶ್ರೀಮತಿ ನಳಿನಿ ಅವರು ಧ್ಯಾನದ ಅಗತ್ಯತೆ ಮತ್ತು ಅದನ್ನು ನಡೆಸುವ

ಧ್ಯಾನ ತರಬೇತಿ ಶಿಬಿರ Read More »

ವಾಣಿಜ್ಯ ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕಾದ ವೃತ್ತಿ ಕೌಶಲ್ಯಗಳು

ಕೆಲವು ಕೌಶಲ್ಯಗಳನ್ನು ಪ್ರಕೃತಿ  ನಮಗೆ ಕಲಿಸುತ್ತದೆ. ಓದುವುದು ಬರೆಯುವುದು ಲೆಕ್ಕಾಚಾರದ ಸಾಮರ್ಥ್ಯಗಳನ್ನು ನಿತ್ಯ ಜೀವನದಲ್ಲಿ ನಾವೇ ಕಲಿತುಕೊಳ್ಳಬೇಕು. ವೃತ್ತಿ ಮಾರ್ಗದರ್ಶನಕ್ಕೆ ಬೇಕಾದ ಆಸಕ್ತಿ , ಆತ್ಮ ವಿಶ್ವಾಸ,ಒಗ್ಗಟ್ಟು  ಇವುಗಳನ್ನು ಮೈಗೂಡಿಸಿಕೊಂಡು ಹೆಜ್ಜೆ ಇಟ್ಟಾಗ ನಮ್ಮ ವೃತ್ತಿ ಫಲಪ್ರದವಾಗುವುದು ಎಂದು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಎಂಬಿ ಎ ವಿಭಾಗ ಮುಖ್ಯಸ್ಥರಾದ ಡಾ. ಸುರೇಖಾ ಪ್ರಭು ಅವರು ಹೇಳಿದರು. ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ವಾಣಿಜ್ಯ ಸಂಘದ ವತಿಯಿಂದ ನಡೆದ ಆಧುನಿಕ ಯುಗದಲ್ಲಿ ವಾಣಿಜ್ಯ ವಿದ್ಯಾರ್ಥಿಗಳು

ವಾಣಿಜ್ಯ ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕಾದ ವೃತ್ತಿ ಕೌಶಲ್ಯಗಳು Read More »