News & Events

Academic study visit by Sullia NMPUC students

ಪ್ರಗತಿಪರ ಕೃಷಿಕರಾದ ತಿರುಮಲೇಶ್ವರ ಭಟ್ ಕುರಿಯಾಜೆ ಇವರ ಕೃಷಿ ಭೂಮಿಗೆ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನ ಭೇಟಿ ಹಮ್ಮಿಕೊಳ್ಳಲಾಗಿತ್ತು. 20 ವರ್ಷದಿಂದ ಕೃಷಿ ಭೂಮಿಯಲ್ಲಿ ವಿಶಿಷ್ಟ ಮಾದರಿಯ ಅಡಿಕೆ ನಾಟಿ ವಿಧಾನ, ದೇಶ ವಿದೇಶದ ಹಣ್ಣಿನ ಗಿಡಗಳು, ಹಸು ಸಾಕಾಣಿಕೆ, ಸುತ್ತಮುತ್ತಲಿನ ಆವರಣದಲ್ಲಿ ಬೆಳೆಸಿದ ಉದ್ಯಾನವನ,ಸುಮಾರು 300 ಬಗೆಯ ಕಳ್ಳಿ ಸಸ್ಯಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಲಾಯಿತು . ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರ ಮಾರ್ಗದರ್ಶನದಲ್ಲಿ ಈ […]

Academic study visit by Sullia NMPUC students Read More »

World Environment Day celebration at Sullia NMPUC

ನಾವು ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಬದುಕಬೇಕು. ಭೂಮಿಯಲ್ಲಿ ತಾಪಮಾನ ಹೆಚ್ಚುತ್ತಿದ್ದು,ದಟ್ಟ ಕಾಡಿನಲ್ಲಿ ಗಿಡಗಳು ಸುಟ್ಟು ಹೋಗುತ್ತಿದೆ , ಪರಿಸರ ಕಾಳಜಿ ಪ್ರಾಯೋಗಿಕವಾಗಿ ಆಗಬೇಕಿದೆ.ಪ್ಲಾಸ್ಟಿಕ್ ನಿರ್ಮೂಲನೆಯಾಗಬೇಕು ಎಂದು ಸುಳ್ಯ ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಸಂಜೀವ ಕುದ್ಪಾಜೆ ಹೇಳಿದರು. ಅವರು ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಅಭಿವೃದ್ಧಿಯ ನೆಪದಲ್ಲಿ ಪರಿಸರ ಹಾಳಾಗುತ್ತಿದೆ. ಶುದ್ಧ ಆಹಾರ, ಗಾಳಿ,ಪರಿಸರವನ್ನು ಶುಭ್ರವಾಗಿಟ್ಟು

World Environment Day celebration at Sullia NMPUC Read More »

Orientation Program at NMPUC Sullia

ವ್ಯಕ್ತಿತ್ವ ವೃದ್ಧಿಸಲು ಸಾಮರ್ಥ್ಯ ಮುಖ್ಯ -ಪ್ರೊ ಎಂ ಬಾಲಚಂದ್ರ ಗೌಡ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಾಧನೆಗೈಯಲು ಉತ್ತಮ ಸಾಮರ್ಥ್ಯವನ್ನು ಮೊದಲು ಗಳಿಸಬೇಕು.ಆ ಮೂಲಕ ನಿರಂತರ ಸಾಧನೆಯೊಂದಿಗೆ ಯಶಸ್ಸು ಗಳಿಸಬಹುದು ಎಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ ಎಂ ಬಾಲಚಂದ್ರ ಗೌಡ ಅವರು ಹೇಳಿದರು.ಡಾ.ಕುರುಂಜಿ ವೆಂಕಟ್ರಮಣ ಗೌಡರ ದೂರದೃಷ್ಟಿಯ ಫಲವಾಗಿ ಸಮಾಜದ ಏಳಿಗೆಯಾಗಿದೆ,ಸುಳ್ಯದಲ್ಲಿ ಶಿಕ್ಷಣದ ಕ್ರಾಂತಿಯಾಗಿದೆ ಎoದು ಅವರು ತಿಳಿಸಿದರು. ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಜೂನ್ 1ರಂದು ಪ್ರ. ಪಿಯುಸಿ

Orientation Program at NMPUC Sullia Read More »

Annual Day Celebration 2022

ಸಮಾಜದ ಎಲ್ಲರ ಧ್ವನಿಯನ್ನು ಕೇಳುವವರಿರಬೇಕು. ನೋವಿಗೆ ಶಮನ ಮಾಡುವವರು ಇರಬೇಕು.ಇದು ಆರೋಗ್ಯವಂತ ಸಮಾಜದ ಲಕ್ಷಣ. ಭಾರತೀಯರಿಗೆ ಹಿಂದೆ ಹಿಂಜರಿಕೆಯ ಮನೋಭಾವವಿತ್ತು .ಈಗ ಭಾರತದಲ್ಲಿ ಜನಸoಖ್ಯೆ ಜಾಸ್ತಿ ಇದ್ದರೂ  ಮಾನವ ಸಂಪನ್ಮೂಲವು  ಸಾಧನೆಗಳ ಮೂಲಕ ವಿಶ್ವಕ್ಕೆ ಕೊಡುಗೆ ನೀಡುತ್ತಿದೆ. ನಮ್ಮ ದೇಶ ವಿವಿಧ ರಂಗಗಳಲ್ಲಿ ಜಗತ್ತಿನಲ್ಲಿ ಹೆಮ್ಮೆ ಪಡುವ ಸಾಧನೆಗೈಯುತ್ತಿದೆ.ಒಳ್ಳೆಯ ಕನಸುಗಳು ಒಳ್ಳೆಯ ಯೋಚನೆಗಳಿಗೆ ಪ್ರೇರಣೆ ನೀಡುತ್ತದೆ.ವಿದ್ಯಾರ್ಥಿಗಳು ಒಳ್ಳೆಯ ಕನಸುಗಾರರಾಗಿ ವಿಶ್ವಕ್ಕೆ ಕೊಡುಗೆ ನೀಡಿ.ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಶಿಕ್ಷಣವು ಸಮಾಜದ ಏಳಿಗೆಯಲ್ಲಿ ಮುಖ್ಯ ಪಾತ್ರ ವಹಿಸುವುದು

Annual Day Celebration 2022 Read More »

Lecture on National Education Policy at Sullia NMPUC

   ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸುಳ್ಯ ನೆಹರು ಮೆಮೋರಿಯಲ್ ಪ್ರಾoಶುಪಾಲ ಪ್ರೊ ರುದ್ರ ಕುಮಾರ್ ಎಂ ಎಂ ಅಧ್ಯಕ್ಷತೆ ವಹಿಸಿ, ಉಪನ್ಯಾಸ ನೀಡುತ್ತಾ “ರಾಷ್ಟ್ರೀಯ ಶಿಕ್ಷಣ ನೀತಿ”ಯ ಪ್ರಕಾರ  ವಿದ್ಯಾರ್ಥಿಗಳು ಪದವಿ ಹಂತವನ್ನು 3ವರ್ಷಗಳ ಕಾಲ ಅಧ್ಯಯನ ಮಾಡಿ  ಮುಂದಿನ ಹಂತದ ಶಿಕ್ಷಣಕ್ಕೆ ಹೋಗಲು ಅವಕಾಶವಿದೆ.ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣದಂತೆ ಇಂದು ಪದವಿ ಶಿಕ್ಷಣಕ್ಕೂ ಬೇಡಿಕೆ ಇದೆ ಎಂದರು.    ಮುಖ್ಯ ಅತಿಥಿಗಳಾಗಿ ಪದವಿ

Lecture on National Education Policy at Sullia NMPUC Read More »

Career guidance program at NMPUC SULLIA

ಸುಳ್ಯ ಎನ್ನೆoಪಿಯುಸಿಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಮ್ಮ ಕನಸುಗಳನ್ನು ನನಸಾಗಿಸಲು ಅವಕಾಶಗಳ ಕಡೆ ಗಮನ ನೀಡಬೇಕು, ಕನಸುಗಳು ಕಾರ್ಯ ಸಾಧನೆಗೆ ಸ್ಫೂರ್ತಿ ನೀಡಬಲ್ಲದು.ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಿದ್ಧರಾಗಬೇಕು. ಛಲ, ಶಿಸ್ತು,ಪ್ರಯತ್ನ,ಸಮರ್ಪಣಾ ಭಾವ,ತೀರ್ಮಾನ ಮೊದಲಾದ ಗುಣಗಳು ನಮ್ಮ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಭವಿಷ್ಯದ ಬಗ್ಗೆ ಯೋಚಿಸಿ ಕಾರ್ಯ ಪ್ರವೃತ್ತರಾಗಿ ಎಂದು ನಿವೃತ್ತ ಪ್ರಾ oಶುಪಾಲ, ಸಂಪನ್ಮೂಲ ವ್ಯಕ್ತಿ ಬಿ ವಿ ಸೂರ್ಯನಾರಾಯಣ ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ, ಉದ್ಯೋಗದ ವಿಫುಲ ಅವಕಾಶಗಳನ್ನು ತಿಳಿಸಿದರು.ಅವರು ಸುಳ್ಯದ

Career guidance program at NMPUC SULLIA Read More »

ಸುಳ್ಯ ಎನ್ನೆoಪಿಯುಸಿಯ ಜಿ.ಎಂ. ಸೋಹನ್ ವಿಭಾಗೀಯ ಮಟ್ಟಕ್ಕೆ ಆಯ್ಕೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ಜ್ಞಾನ ಮಂಡಳಿ ಇದರ ಸಹಯೋಗದೊಂದಿಗೆ ಪುನೀತ್ ನ್ಯಾನೋ ಉಪಗ್ರಹ ಯೋಜನೆಯಡಿ ಆಯೋಜಿಸಿದ ಜಿಲ್ಲಾ ಮಟ್ಟದ ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರ.ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜಿ ಎಂ ಸೋಹನ್ ಭಾಗವಹಿಸಿದ್ದು ಮೈಸೂರು ವಿಭಾಗೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಆಡಳಿತ ಮಂಡಳಿ, ಪ್ರಾ oಶುಪಾಲರು, ಬೋಧಕ- ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

ಸುಳ್ಯ ಎನ್ನೆoಪಿಯುಸಿಯ ಜಿ.ಎಂ. ಸೋಹನ್ ವಿಭಾಗೀಯ ಮಟ್ಟಕ್ಕೆ ಆಯ್ಕೆ. Read More »

ಸುಳ್ಯ ಎನ್ನೆoಸಿ ಮತ್ತು ಎನ್ನೆoಪಿಯು ಕಾಲೇಜುಗಳ ಸಹಯೋಗದಲ್ಲಿ ಕೋಟಿ ಕಂಠ ಗಾಯನಕಾರ್ಯಕ್ರಮ.

ಸುಳ್ಯದ ನೆಹರು ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸಹಭಾಗಿತ್ವದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ ಕೋಟಿ ಕಂಠ ಗಾಯನ ನನ್ನ ನಾಡು ನನ್ನ ಹಾಡು ಕಾರ್ಯಕ್ರಮ ಅ.28ರಂದು ನಡೆಯಿತು. ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ವಿದ್ಯಾರ್ಥಿನಿ ನಿಶ್ವಿತ ಮತ್ತು ಬಳಗದವರು ಹಾಗೂ ಪದವಿ ವಿಭಾಗದ ವಿದ್ಯಾರ್ಥಿನಿ ಅನಘ ಮತ್ತು ತಂಡದವರು ಮತ್ತು ವಿದ್ಯಾರ್ಥಿ ವೃಂದದವರು ಹಾಡುಗಳನ್ನು ಸಾದರಪಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ

ಸುಳ್ಯ ಎನ್ನೆoಸಿ ಮತ್ತು ಎನ್ನೆoಪಿಯು ಕಾಲೇಜುಗಳ ಸಹಯೋಗದಲ್ಲಿ ಕೋಟಿ ಕಂಠ ಗಾಯನಕಾರ್ಯಕ್ರಮ. Read More »

ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಗಾಂಧಿ ಜಯಂತಿ

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಸಭಾಧ್ಯಕ್ಷತೆಯನ್ನು ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಉಪನ್ಯಾಸಕ, ವಿದ್ಯಾರ್ಥಿ ಕ್ಷೇಮಾಧಿಕಾರಿ ದಾಮೋದರ ಪಿ ವಹಿಸಿದ್ದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಗಾಂಧಿ ಜಯಂತಿ ಆಚರಣೆ ಕುರಿತು ಮಾತನಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ ಕೆ ಸ್ವಾಗತಿಸಿ, ಉಪನ್ಯಾಸಕಿ ರೇಷ್ಮಾ ಎಂ ವಂದಿಸಿದರು.  

ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಗಾಂಧಿ ಜಯಂತಿ Read More »

Awareness program on drug addiction at NMPUC SULLIA

              ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ತಾಲೂಕು ಆಡಳಿತ ಸಮಿತಿ ಸುಳ್ಯ, ವಕೀಲರ ಸಂಘ ಸುಳ್ಯ, ಪೊಲೀಸ್ ಇಲಾಖೆ ಸುಳ್ಯ, ಶಿಕ್ಷಣ ಇಲಾಖೆ ಸುಳ್ಯ, ಆರೋಗ್ಯ ಇಲಾಖೆ ಸುಳ್ಯ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸುಳ್ಯ, ಸುದ್ದಿ ಸಮೂಹ ಮಾಧ್ಯಮ ಸುಳ್ಯ, ನೆಹರು ಮೆಮೋರಿಯಲ್ ಪಪೂ ಕಾಲೇಜು ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ವ್ಯಸನಗಳ ಜಾಗೃತಿ ಕುರಿತು ಕಾನೂನು ಅರಿವು ಕಾರ್ಯಕ್ರಮ

Awareness program on drug addiction at NMPUC SULLIA Read More »