ಸುಳ್ಯ ಎನ್ನೆoಪಿಯುಸಿಯ ಪ್ರೀತಿಕಾಳಿಗೆ ಅಭಿನಂದನೆ

ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಅಂಗವಾಗಿ ಸುಳ್ಯ ಸ ಪ ಪೂ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಪ್ರೀತಿಕಾ ಎಂ ಎಸ್ 601/625ಇವರನ್ನು ಅಭಿನಂದಿಸಲಾಯಿತು. ಈ ವಿದ್ಯಾರ್ಥಿನಿ ಸ ಪ್ರೌಢ ಶಾಲೆ ದುಗಲಡ್ಕ ಇಲ್ಲಿ ವ್ಯಾಸಂಗ ಮಾಡಿದ್ದು ಪ್ರಸ್ತುತ ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾಳೆ.ವಿದ್ಯಾರ್ಥಿನಿಯನ್ನು ಆಡಳಿತ ಮಂಡಳಿ, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.