ಶಾಲಾ ಶಿಕ್ಷಣ ಇಲಾಖೆ (ಪಪೂ )ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರದ ಸಹಯೋಗದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪಪೂ ಬಾಲಕರ ವಿಭಾಗದ ಫುಟ್ ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ದ್ವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಅಮನ್ ಅಬ್ದುಲ್ಲ ಜಿ ಎಚ್, ಅಬ್ದುಲ್ ಭಾಷಿತ್ ಎಂ ಎಚ್ ಮಂಗಳೂರಿನ ಉಳ್ಳಾಲದ ಪಾಂಡ್ಯ ರಾಜ್ ಬಲ್ಲಾಳ್ ಪಿಯು ಕಾಲೇಜಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಸುಳ್ಯ ತಾಲೂಕು ತಂಡವನ್ನು ಪ್ರತಿನಿಧಿಸಲಿದ್ದಾರೆ . ಈ ಕ್ರೀಡಾಪಟುಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಆಡಳಿತ ಅಧಿಕಾರಿ,ಬೋಧಕ, ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
