Annual Sports Event At NMPUC Sullia

ಇಲ್ಲಿನ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಡಿ 9ರಂದು ನಡೆಯಿತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶು ಪಾಲರಾದ ಮಿಥಾಲಿ ಪಿ ರೈ ವಹಿಸಿದ್ದರು.ಗೌರವ ಉಪಸ್ಥಿತರಾದ ಸುಳ್ಯ ಸ ಪ್ರ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಸತೀಶ್ ಕುಮಾರ್ ಕೆ ಆರ್ ಅವರು ಕ್ರೀಡಾಕೂಟದ ಧ್ವಜಾರೋಹಣ, ಗೌರವ ವಂದನೆಯನ್ನು ಸ್ವೀಕರಿಸಿದರು.ಕಾರ್ಯಕ್ರಮದ ಉದ್ಘಾಟಕರಾದ ಎ ಓ ಎಲ್ ಇ (ರಿ )ಸುಳ್ಯ ಇದರ ಕಾರ್ಯದರ್ಶಿ ಹೇಮನಾಥ ಕೆ.ವಿ. ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿ ದೀಪ ಪ್ರಜ್ವಲನೆ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪದವಿ ವಿಭಾಗದ ಪ್ರಾoಶುಪಾಲರಾದ ಪ್ರೊ ಎಂ ಎಂ ರುದ್ರ ಕುಮಾರ್,ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಉಪಸ್ಥಿತರಿದ್ದರು.,ಪದವಿ ವಿಭಾಗದ ದೈ ಶಿ ನಿರ್ದೇಶಕ ಲೆಫ್ಟಿಂನೆಂಟ್ ಸೀತಾರಾಮ ಎಂ ಡಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದೈ ಶಿ ನಿರ್ದೇಶಕ ಮಿಥನ್ ಕ್ರೀಡಾಕೂಟದಲ್ಲಿ ಸಹಕರಿಸಿದರು.

ವಿದ್ಯಾರ್ಥಿಗಳಾದ ಅಭಿಷೇಕ್ ಎಂ,ಯಶಸ್,ಜೀವಿತ್ ಕುಮಾರ್ ಪ್ರಾರ್ಥಿಸಿದರು.ಉಪನ್ಯಾಸಕಿ ಸಾವಿತ್ರಿ ಕೆ ಸ್ವಾಗತಿಸಿದರು.ಕ್ರೀಡಾ ಕಾರ್ಯದರ್ಶಿ ಅಬ್ದುಲ್ ರೌಫ್ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.ಆರಂಭದಲ್ಲಿ ಎನ್ ಸಿ ಸಿ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ನೊಂದಿಗೆ ವಿದ್ಯಾರ್ಥಿಗಳ ಪಥ ಸಂಚಲನ ನಡೆಯಿತು.ಉಪನ್ಯಾಸಕರಾದ ಬೇಬಿ ವಿದ್ಯಾ ಪಿ.ಬಿ., ಪ್ರೇಮಲತಾ ಎ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ಸಂಘದ ನಾಯಕ ಅಕ್ಷಯ್ ರೈ ವಂದಿಸಿದರು.