“ನಮ್ಮ ಸ್ಪಷ್ಟ ಗುರಿಯನ್ನು ನಿರ್ಧರಿಸಿ ಆ ಕಠಿಣ ಪರಿಶ್ರಮ, ಆಸಕ್ತಿ,ಸಾಧಿಸಲು ಬೇಕಾದ ಸಮರ್ಪಣಾ ಗುಣ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ವಿಷಯದ ಕುರಿತಾದ ಶೋಧ, ಜ್ಞಾನ ಮೊದಲಾದ ಗುಣ ನಮ್ಮಲ್ಲಿ ಇರಬೇಕು”ಎಂದು ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ, ಸಂಸ್ಥೆಯ ಮಾಜಿ ಪ್ರಾಚಾರ್ಯರು, ಪದವಿ ವಿಭಾಗದ ವಾಣಿಜ್ಯ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರಾದ ರತ್ನಾವತಿ ಡಿ ಅವರು ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಕೆವಿಜಿ ಯವರ ಶಿಕ್ಷಣ ಕ್ರಾಂತಿಯಿಂದ ಸಮಾಜಕ್ಕೆ ಕೊಡುಗೆ ನೀಡಿದ್ದು ಮಾತ್ರವಲ್ಲದೇ ಆ ಸೇವಾ ಗುಣ ಸಂಸ್ಥೆಯ ಅಧ್ಯಕ್ಷರ ಮೂಲಕ ಮುಂದುವರಿದಿದೆ ಎಂದರು.ಪಿಯುಸಿ ನನ್ನ ಬದುಕನ್ನು ಪ್ರಭಾವಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ ಓ ಎಲ್ ಈ (ರಿ )ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದ ಅವರು ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ ವಿದ್ಯೆ ಕಲಿಯುವುದು ತಪಸ್ಸು ಇದ್ದಂತೆ, ವಿದ್ಯೆಗೆ ಸಮಾನವಾದುದು ಯಾವುದು ಇಲ್ಲ, ಗುರುಗಳ ಮಾರ್ಗದರ್ಶನ ಬಹಳ ಮುಖ್ಯ.ಪ್ರತಿಯೊಂದು ಸಾಧನೆಗೆ ಪ್ರಯತ್ನ ಮುಖ್ಯ. ಶಿಸ್ತುಬದ್ದ ಜೀವನ ಶೈಲಿ ನಮ್ಮ ವ್ಯಕ್ತಿತ್ವ ವಿಕಾಸಕ್ಕೆ ಪೂರಕ. ಪೂಜ್ಯ ಕೆವಿಜಿ ಯವರ ಪಂಚ ಸೂತ್ರಗಳು, ಅವರ ಶಿಕ್ಷಣ ಕಾಳಜಿ ಸಮಾಜಕ್ಕೆ ವಿದ್ಯಾವಂತರನ್ನು, ಸಾಧಕರನ್ನು ಕೊಡುಗೆಯಾಗಿ ನೀಡಿದೆ. ವಿದ್ಯಾರ್ಥಿಗಳು ಸಾಧನೆಗೈದು ಸಂಸ್ಥೆಗೆ ಒಳ್ಳೆಯ ಹೆಸರನ್ನು ಗಳಿಸಿ ಎಂದರು. ವೇದಿಕೆಯಲ್ಲಿ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲ್,ಪದವಿ ವಿಭಾಗದ ಪ್ರಾಚಾರ್ಯರಾದ ಡಾ ರುದ್ರ ಕುಮಾರ್ ಎಂ ಎಂ, ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ,ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಮನ್ವಿತಾ, ಚಿರಾಗ್, ಪ್ರಜೀಶ್,ಶೇಕ್ ಅರ್ಮನ್ ನೂರುದ್ದಿನ್,ಪ್ರಗತಿ, ಡಿಂಪಲ್ ಉಪಸ್ಥಿತರಿದ್ದರು.ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಅಂಕ ಗಳಿಸಿದ 33 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶಾಲ್ಮಲಿ& ಬಳಗದವರು ಪ್ರಾರ್ಥಿಸಿ, ಪ್ರಾಚಾರ್ಯರಾದ ಮಿಥಾಲಿ ಪಿ ರೈ ಸ್ವಾಗತಿಸಿದರು. ಪ್ರಾo ಶುಪಾಲರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ , ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್ ಪ್ರದಾನ ಮಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ ಪ್ರತಿಜ್ಞಾ ವಿಧಿ ಬೋಧಿಸಿದರು.ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಸಾವಿತ್ರಿ ಕೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ರತ್ನಾವತಿ ಡಿ ಅವರನ್ನು ಸನ್ಮಾನಿಸಲಾಯಿತು. ಡಿಸ್ಟಿಂಕ್ಷನ್ ಅಂಕ ಗಳಿಸಿದವರ ಪಟ್ಟಿಯನ್ನು ಉಪನ್ಯಾಸಕರಾದ ಬೇಬಿ ವಿದ್ಯಾ ಪಿ ಬಿ, ವಿನಯ್ ನಿಡ್ಯಮಲೆ, ರಕ್ಷಿತ್ ಬಿ ವಾಚಿಸಿದರು.ಹಿರಿಯ ವಿದ್ಯಾರ್ಥಿಗಳಾದ ಸುಗುಣ, ಶ್ರೇಯ ಎಂ ಜಿ ಅನಿಸಿಕೆ ವ್ಯಕ್ತ ಪಡಿಸಿದರು.ವಿದ್ಯಾರ್ಥಿಗಳಾದ ಡೆನಿಕ ಲೋಬೊ, ಅನ್ವಿತಾ ನಿರೂಪಿಸಿ, ಹೆಡ್ ಗರ್ಲ್ ಮನ್ವಿತಾ ವಂದಿಸಿದರು. .