ಶಾಲಾ ಶಿಕ್ಷಣ ಇಲಾಖೆ (ಪಪೂ )ಮತ್ತು ಬದ್ರಿಯಾ ಪಿಯು ಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ನಡೆದ ದಕ ಜಿಲ್ಲಾ ಮಟ್ಟದ ಪಪೂ ಬಾಲಕರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ಪ್ರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಂತೋಷ್ ಕೆ ಎಸ್ 155 ಕೆಜಿ ಕೆಟಗರಿ ವಿಭಾಗದಲ್ಲಿ ದ್ವಿತೀಯ, ಜೀವನ್ ಎನ್ ಆರ್ 140 ಕೆಜಿ ಕೆಟಗರಿ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.ಮಾಜಿ ರಾಷ್ಟ್ರೀಯ ವೈಟ್ ಲಿಫ್ಟಿಂಗ್ ಚಾಂಪಿಯನ್ ರಮೇಶ್ ಅವರು ತರಬೇತಿ ನೀಡುತ್ತಿದ್ದಾರೆ.ಅಮೋಘ ಸಾಧನೆಗೈದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಆಡಳಿತ ಅಧಿಕಾರಿ,ಬೋಧಕ, ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
